

ನಿನ್ನೆ ಶ್ರೀಕೃಷ್ಣ ಜನ್ಮಾಷ್ಟಮಿ. ನಾಡಿನೆಲ್ಲೆಡೆ ಕರೊನಾ ಕರಿಛಾಯೆಯ ನಡುವೆಯೂ ಒಂದಿಷ್ಟು ಖುಷಿ, ಸಂಭ್ರಮ ಆಚರಿಸುವುದಕ್ಕೆ ಸಕಲ ಕಷ್ಟ ಸಂಕಷ್ಟಗಳನ್ನು ಮರೆಯುವುದಕ್ಕೆ, ಕೃಷ್ಣ ನಾಮಸ್ಮರಣೆ ಮಾಡುವುದಕ್ಕೆ ಒಂದು ನಿಮಿತ್ತ. ಮನೆಮನೆಯಲ್ಲೂ ಇರುವ ಮುದ್ದು ಕೃಷ್ಣ ರಾಧೆಯರನ್ನು ಕಣ್ತುಂಬಿಕೊಳ್ಳಲು ಇದೊಂದು ವೇದಿಕೆ. ಹಾವೇರಿಯ ಪ್ರಕಾಶ್ ಡಿಸಲೆ ಮತ್ತು ಪವಿತ್ರಾ ದಂಪತಿಯ ಪುತ್ರ ಸಾತ್ವಿಕ್ ಮುದ್ದು ಕೃಷ್ಣನಾಗಿ ಕಂಗೊಳಿಸಿದ್ದು ಹೀಗೆ...