

ತಾಳಿಕೋಟೆ: ಸ್ಥಳೀಯ ದ್ಯಾಮವ್ವದೇವಿ ದೇವಸ್ಥಾನದ ಕಾರ್ತಿಕೋತ್ಸವದ ದಶಮಾನೋತ್ಸವ ಅಂಗವಾಗಿ ಭಾನುವಾರ ಬೆಳಗ್ಗೆ ಶ್ರೀದೇವಿಯ ಶಿಲಾ ಪಾದುಕೆ ಪ್ರತಿಷ್ಠಾಪನಾ ಕಾರ್ಯ ದೇಗುಲದ ಮಹಾದ್ವಾರದಲ್ಲಿ ಭಕ್ತಿಭಾವದೊಂದಿಗೆ ಜರುಗಿತು.
ದುರ್ಗಾದೀಪ ನಮಸ್ಕಾರದೊಂದಿಗೆ ಭಾನುವಾರ ಸಂಜೆ ರಂಗಪೂಜೆ ದೀಪೋತ್ಸವ, ದ್ಯಾಮವ್ವದೇವಿ ಮಹಾ ಪೂಜೆ ನಡೆಯಿತು. ವಿಶ್ವನಾಥ ಶರ್ಮಾ ಹಾಗೂ ಸಿದ್ಧೇಶ ಶರ್ಮಾ ಅವರಿಂದ ದುರ್ಗಾ ಹೋಮ ಹವನ ಕಾರ್ಯಕ್ರಮ ಜರುಗಿತು.
ಸಿದ್ದಪ್ಪ ಬಡಿಗೇರ ಅವರು ನಸುಕಿನ ಜಾವ ದ್ಯಾಮವ್ವದೇವಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ನೆರವೇರಿಸಿದರು. ಶ್ರೀಶೈಲ ಬಡಿಗೇರ, ನಾಗರಾಜ ಬಡಿಗೇರ ಅನ್ನಪ್ರಸಾದ ವ್ಯವಸ್ಥೆ ಮಾಡಿದರು.