28ಕ್ಕೆ ಶ್ರೀ ವರದಾಂಜನೇಯ ಸ್ವಾಮಿ ದೇವಸ್ಥಾನ ವಾರ್ಷಿಕೋತ್ಸವ

sree varadanjaneya temple press meet
ಶ್ರೀ ವರದಾಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಟಿ.ಅರುಣ್ ಮಾತನಾಡಿದರು. ಶಿವಮೊಗ್ಗ ಯೋಗರಾಜ್, ಡಿ.ಮಹಾಬಲೇಶ್ವರ, ಎಚ್.ಪಿ.ಕೃಷ್ಣಮೂರ್ತಿ, ಶಿವಣ್ಣಗೌಡ, ಕೆ.ಪರಮೇಶ್ವರ್, ದೇವಪ್ಪ ಇದ್ದರು.
Published on

ಶಿವಮೊಗ್ಗ: ವಿವೇಕಾನಂದ ಬಡಾವಣೆ ಇ ಬ್ಲಾಕ್‌ನಲ್ಲಿರುವ ಶ್ರೀ ವರದಾಂಜನೇಯ ಸ್ವಾಮಿ ದೇವಸ್ಥಾನದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಏ. 28ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಟಿ.ಅರುಣ್ ಹೇಳಿದರು.

ವಾರ್ಷಿಕೋತ್ಸವ ಅಂಗವಾಗಿ ಏ. 28ರಂದು ಬೆಳಗ್ಗೆ 6ಕ್ಕೆ ಸಾಮೂಹಿಕ ಪ್ರಾರ್ಥನೆ, ಗಣಪತಿ ಪೂಜೆ ನಡೆಯಲಿದೆ. ನವಗ್ರಹದೊಂದಿಗೆ ಶ್ರೀ ರುದ್ರಹೋಮ ಮತ್ತು ಗೋಪುರ ಕಲಶಾಭಿಷೇಕ ಮಾಡಲಾಗುವುದು. ಗಾಣಗಪುರ ದತ್ತ ಪೀಠದ ಪ್ರಧಾನ ಅರ್ಚಕ ಗುಂಡು ಭಟ್ ಹಾಗೂ ಸಹ ಪುರೋಹಿತರು ಕಾರ್ಯಕ್ರಮ ನಡೆಸಿಕೊಡುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಕ್ತಾದಿಗಳು ಧಾರ್ಮಿಕ ಕಾರ್ಯಕ್ಕೆ ಅಕ್ಕಿ, ಬೆಲ್ಲ, ಬೇಳೆ ಇತರ ವಸ್ತುಗಳನ್ನು ಮತ್ತು ಧನ ಸಹಾಯ ಮಾಡಬಹುದು. ದೇವಸ್ಥಾನದಲ್ಲಿ ಪ್ರತಿನಿತ್ಯವೂ ಪೂಜೆ ನಡೆಯುತ್ತದೆ. ಶನಿವಾರ, ಅಮಾವಾಸ್ಯೆ ಹಾಗೂ ಹುಣ್ಣಿಮೆಯಂದು ವಿಶೇಷ ಪೂಜೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಅನ್ನ ಸಂತರ್ಪಣೆ ಕೂಡ ಇರುತ್ತದೆ ಎಂದರು.
ದೇವಸ್ಥಾನವು ತನ್ನದೇ ಆದ ಇತಿಹಾಸ ಹೊಂದಿದ್ದು, ತುಂಗಾ ಮೇಲ್ದಂಡೆ ಚಾನಲ್ ನಿರ್ಮಾಣ ಮಾಡುವಾಗ ಸಿಕ್ಕ ಶ್ರೀ ಆಂಜನೇಯ ಸ್ವಾಮಿ ವಿಗ್ರಹ ತಂದು ಗುಡಿ ನಿರ್ಮಿಸಿ ವರ್ಷಗಳಿಂದ ಪೂಜೆ ಮಾಡಲಾಗುತ್ತಿದೆ. ನಂತರ ಸಮಿತಿ ರಚಿಸಿ ವಾಮದೇವ ಭಟ್ಟ ಗುರುಗಳ ಮಾರ್ಗದರ್ಶನದಲ್ಲಿ 70 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಸಮಿತಿ ಪದಾಧಿಕಾರಿಗಳಾದ ಶಿವಮೊಗ್ಗ ಯೋಗರಾಜ್, ಡಿ.ಮಹಾಬಲೇಶ್ವರ, ಎಚ್.ಪಿ.ಕೃಷ್ಣಮೂರ್ತಿ, ಶಿವಣ್ಣಗೌಡ, ಕೆ.ಪರಮೇಶ್ವರ್, ದೇವಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net