ಶ್ರೀರಾಘವ ಕಲಾ ಸಂಗಮದಿಂದ ದಾಸರ ಪದಗಳ ಗಾಯನ ಸ್ಪರ್ಧೆ

New Project
Published on

ಬೆಂಗಳೂರು : ದಾಸ ಸಾಹಿತ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಶ್ರೀರಾಘವ ಕಲಾ ಸಂಗಮ ಸಂಸ್ಥೆಯು ರಾಜ್ಯಮಟ್ಟದ ದಾಸರ ಪದಗಳ ಗೀತ ಗಾಯನ ಸ್ಪರ್ಧೆಯನ್ನು ಆಯೋಜಿಸಿದೆ. ಫೆ.18ರ ಭಾನುವಾರದಂದು ವಿವಿಪುರಂನಲ್ಲಿರುವ ವಾಸವಿ ವಿದ್ಯಾನಿಕೇತನ ಸಮೂಹ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಬೆಳಗ್ಗೆ 9 ಗಂಟೆಯಿಂದಲ ಸ್ಪರ್ಧೆ ಆರಂಭವಾಗಲಿದೆ. ಸ್ಪರ್ಧೆಯು ಮೂರು ವಿಭಾಗಗಳಲ್ಲಿ ನಡೆಯಲಿದ್ದು, 8 ರಿಂದ 14 ವರ್ಷ, 15 ರಿಂದ 24 ವರ್ಷ ಮತ್ತು 25 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಒಬ್ಬರು ಒಂದು ಗಾಯನವನ್ನು ಮಾತ್ರ ಹಾಡಬಹುದು. ಪ್ರವೇಶ ಶುಲ್ಕ ಒಬ್ಬರಿಗೆ 300 ರೂ. ನಿಗದಿಗೊಳಿಸಲಾಗಿದ್ದು, ಆಸಕ್ತರು ಮೊಬೈಲ್ ಸಂಖ್ಯೆ 88845 49896 ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net