ಜಗತ್ತಿನಲ್ಲೇ ಅತಿ ದೊಡ್ಡ ಕಿಡ್ನಿ ಸ್ಟೋನ್ ತೆಗೆದು ಗಿನ್ನೆಸ್‌ ದಾಖಲೆ ನಿರ್ಮಿಸಿದ ವೈದ್ಯರು

Sri Lankan Army
Published on

ಕೊಲಂಬೋ: ಕೆಲವೊಮ್ಮೆ ವೈದ್ಯಕೀಯ ಲೋಕದಲ್ಲಿ ವಿಚಿತ್ರ ಮತ್ತು ವಿಭಿನ್ನವಾದ ಸಂಗತಿಗಳು ಸುದ್ದಿಯಾಗುತ್ತವೆ. ಸತ್ತವರು ಬದುಕಿ ಬಂದಿರುವುದು ಹಾಗೂ ವಾಸಿಯಾಗದೇ ಇರುವ ಕಾಯಿಲೆ ವಾಸಿಯಾಗಿರುವುದು ಹೀಗೆ ಸುದ್ದಿಯಾಗುತ್ತವೆ. ಹೀಗೆ ಪ್ರಪಂಚದ ಅತಿ ದೊಡ್ಡ ಕಿಡ್ನಿ ಸ್ಟೋನ್‌ ಹೊರತೆಗೆಯುವ ಮೂಲಕ ಶ್ರೀಲಂಕಾ ಸೇನಾ ವೈದ್ಯರು ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಕೊಲಂಬೋದ ಸೇನಾ ಆಸ್ಪತ್ರೆಯಲ್ಲಿ ಕಿಡ್ನಿ ಸ್ಟೋನ್‌ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಮೂಲಕ 13 ಸೆ.ಮೀ ಗಾತ್ರದ ಕಿಡ್ನಿ ಸ್ಟೋನ್‌ ಅನ್ನು ವೈದ್ಯರು ಹೊರತೆಗೆದಿದ್ದಾರೆ. ಪ್ರಪಂಚದಲ್ಲಿ ಈವರೆಗೆ ಓರ್ವ ವ್ಯಕ್ತಿಯ ಮೂತ್ರಪಿಂಡದಿಂದ ಹೊರತೆಗೆಯಲಾದ ಅತಿ ದೊಡ್ಡ ಕಿಡ್ನಿ ಸ್ಟೋನ್‌ ಇದಾಗಿದೆ. ಜೂನ್ 1 ರಂದು ಕೊಲಂಮೋ ಆರ್ಮಿ ಆಸ್ಪತ್ರೆಯಲ್ಲಿ ಪ್ರಮುಖ ಶಸ್ತ್ರಚಿಕಿತ್ಸೆಯ ಮೂಲಕ ವಿಶ್ವದ ಅತಿದೊಡ್ಡ ಮತ್ತು ಭಾರವಾದ ಮೂತ್ರಪಿಂಡದ ಕಲ್ಲನ್ನು ತೆಗೆದುಹಾಕಲಾಯಿತು.

ಸುಮಾರು 801 ಗ್ರಾಂ ತೂಕವಿರುವ 13.372 ಸೆ.ಮೀ (5.264 ಇಂಚು) ಉದ್ದವಿರುವ ಕಿಡ್ನಿ ಸ್ಟೋನ್‌ ಹೊರತೆಗೆಯಲಾಗಿದೆ.

ಮಾಜಿ ಸರ್ಜೆಂಟ್ ಕ್ಯಾನಿಸ್ಟಸ್ ಕೂಂಗೆ ಅವರಿಂದ ತೆಗೆದ ಮೂತ್ರಪಿಂಡದ ಕಲ್ಲು ಸುಮಾರು 801 ಗ್ರಾಂ ತೂಕವಿರುವ 13.372 ಸೆ.ಮೀ (5.264 ಇಂಚು) ಉದ್ದವಿದೆ. ಸರಾಸರಿ ಪುರುಷ ಮೂತ್ರಪಿಂಡದ ತೂಕಕ್ಕಿಂತ ಐದು ಪಟ್ಟು ಹೆಚ್ಚು ಇದೆ.

2008 ರಲ್ಲಿ ಪಾಕಿಸ್ತಾನದ ರೋಗಿಯೊಬ್ಬರಲ್ಲಿ 620 ಗ್ರಾಂಗಳಷ್ಟು ತೂಕದ ಮೂತ್ರಪಿಂಡ ಕಲ್ಲು ಪತ್ತೆಯಾಗಿತ್ತು. ಇದು ಸಹ ಗಿನ್ನೆಸ್‌ ದಾಖಲೆ ಪುಟಕ್ಕೆ ಸೇರಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net