

ಕೊಲಂಬೊ: ರಾಮಾಯಣದ ಖಳನಾಯಕ ರಾವಣನ ವೈಮಾನಿಕ ಹಾದಿಗಳ ಕುರಿತು ಸಂಶೋಧನೆ ನಡೆಸಲು ಶ್ರೀಲಂಕಾದ ಅಧಿಕಾರಿಗಳು ಮುಂದಾಗಿದ್ದಾರೆ. ದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರ ಇತ್ತೀಚೆಗೆ ಸಿಂಹಳೀಯ ಪತ್ರಿಕೆಗಳಲ್ಲಿ ಈ ಕುರಿತು ಒಂದು ಜಾಹಿರಾತು ಪ್ರಕಟಿಸಿರುವುದು ಜನರಲ್ಲಿ ಆಸಕ್ತಿ ಕೆರಳಿಸಿದೆ.
‘ದೊರೆ ರಾವಣ ಮತ್ತು ಈಗ ಕಳೆದು ಹೋಗಿರುವ ಪ್ರಾಚೀನ ಪ್ರಮುಖ ವೈಮಾನಿಕ ಮಾರ್ಗಗಳು’ ಎಂಬ ವಿಷಯವಾಗಿ ಸಂಶೋಧನೆ ನಡೆಸಲಾಗುವುದು. ಹೀಗಾಗಿ ರಾವಣನ ವಿಮಾನ ಮಾರ್ಗಗಳ ಕುರಿತು ಮಾಹಿತಿಯಿರುವ ಲೇಖನಗಳು ಅಥವಾ ಸಾಹಿತ್ಯವಿದ್ದವರು ಸಂರ್ಪಸುವಂತೆ ಪ್ರಾಧಿಕಾರದ ಅಧಿಕಾರಿಗಳು ಕೋರಿದ್ದಾರೆ. ಇಮೇಲ್ ಮೂಲಕ ಮಾಹಿತಿ ರವಾನಿಸುವಂತೆ ವಿನಂತಿಸಿದೆ.
ರಾವಣನ ಕುರಿತು ಬಹಳಷ್ಟು ಕಥೆಗಳಿರುವುದರಿಂದ ಅಧಿಕೃತ ವಿವರಣೆ ನೀಡುವುದು ಪ್ರಾಧಿಕಾರದ ಗುರಿಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾವಣ ಉಪಗ್ರಹ
ರಾವಣ ದ್ವೀಪ ರಾಷ್ಟ್ರದ ಧೀರೋದತ್ತ ಅರಸ ಎಂಬುದನ್ನು ಶ್ರೀಲಂಕಾದ ಸಾಮಾಜಿಕ, ಧಾರ್ವಿುಕ ಸಂಘಟನೆಗಳಲ್ಲದೆ ಸರ್ಕಾರ ಕೂಡ ಒಪು್ಪತ್ತದೆ ಮತ್ತು ಗೌರವಿಸುತ್ತವೆ. ಕಟ್ಟರ್ಪಂಥೀಯ ಬೌದ್ಧ ಗುಂಪೊಂದು ತನ್ನನ್ನು ‘ರಾವಣ ಬಾಲಯ’ ಎಂದು ಕರೆಸಿಕೊಳ್ಳುತ್ತದೆ. ಶ್ರೀಲಂಕಾ ಉಪಗ್ರಹಕ್ಕೆ ‘ರಾವಣ-1’ ಎಂದೇ ಹೆಸರಿಟ್ಟಿದೆ.
ಲಂಕಾದಲ್ಲಿ ಮೊದಲ ವಿಮಾನಯಾನ
ರೈಟ್ ಸೋದರರು ವಿಮಾನಯಾನಕ್ಕೆ ನಾಂದಿ ಹಾಡಿದರು ಎಂಬುದು ಆಧುನಿಕ ಐತಿಹಾಸಿಕ ವಿಚಾರವಾಗಿದೆ. ಆದರೆ, ಅದಕ್ಕೂ ಹಿಂದೆ ಶ್ರೀಲಂಕಾದ ದೊರೆ ರಾವಣ ದೇಶದ ಒಳಗಡೆ ಮಾತ್ರವಲ್ಲದೆ ಸುತ್ತಮುತ್ತಲ ಪ್ರದೇಶಗಳಿಗೆ ಸಂಚರಿಸಲು ‘ದಂಡು ಮೊನಾರಾ’ (ಪುಷ್ಪಕ ವಿಮಾನ’) ಎಂಬ ಯಂತ್ರ ಬಳಸುತ್ತಿದ್ದ ಎಂಬ ಪ್ರತೀತಿಯಿದೆ ಎಂದು 2016ಲ್ಲಿ ಶ್ರೀಲಂಕಾದ ಸಾರಿಗೆ ಮತ್ತು ವಿಮಾನಯಾನ ಸಚಿವರಾಗಿದ್ದ ನಿಮಲ್ ಶ್ರೀಪಾಲ ಹೇಳಿದ್ದರು.