More

    ಹಣ ಗಳಿಕೆಗಾಗಿ ಕೊವಿಡ್​-19 ರೋಗಿಗಳ ಪ್ರಾಣದ ಜತೆ ಚೆಲ್ಲಾಟವಾಡಿದ ಐದು ಮಂದಿಯ ಬಂಧನ

    ಅಹಮದಾಬಾದ್​: ಕೊವಿಡ್​-19ರೋಗಿಗಳಿಗೆ ನೀಡಲಾಗುವ ಚುಚ್ಚುಮದ್ದನ್ನು ಅಕ್ರಮವಾಗಿ ವಿತರಿಸುತ್ತಿದ್ದ ಐವರನ್ನು ಗುಜರಾತ್​ ಪೊಲೀಸರು ಬಂಧಿಸಿದ್ದಾರೆ.

    ಗಂಭೀರಸ್ಥಿತಿಯಲ್ಲಿರುವ ಕೊವಿಡ್​-19 ರೋಗಿಗಳಿಗೆ ನೀಡಲಾಗುವ ಟೋಸಿಲಿಜುಮಾವನ್ನು ನಕಲಿಯಾಗಿ ತಯಾರಿಸಿ, ಮಾರಾಟ ಮಾಡುವ ದಂಧೆಯಲ್ಲಿ ಇವರು ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಐವರು ಸೇರಿಕೊಂಡು ಸೂರತ್​ನಲ್ಲಿ ನಕಲಿ ಔಷಧ ತಯಾರಿಕಾ ಕಂಪನಿಯನ್ನು ಪ್ರಾರಂಭಿಸಿದ್ದರು. ಈ ಫಾರ್ಮಾ ಕಂಪನಿ ಮೇಲೆ ಆಹಾರ ಮತ್ತು ಔಷಧಿ ನಿಯಂತ್ರಣಾ ಆಡಳಿತಾಧಿಕಾರಿಗಳು ದಾಳಿ ಮಾಡಿದಾಗ ಸತ್ಯ ಹೊರಬಿದ್ದಿತ್ತು.
    ಆರೋಪಿಗಳನ್ನು ಆಶೀಶ್​ ಶಾ, ಅಕ್ಷಯ್​ ಶಾ, ಹರ್ಷ ಠಾಕೂರ್​, ನೀಲೇಶ್​ ಲಾಲಿವಾಲಾ ಮತ್ತು ಸೋಹೆಲ್​ ಥಾಯ್​ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಪತ್ನಿ ಜತೆ ಟ್ರೆಕ್ಕಿಂಗ್​ ಹೋದ ನೆನಪಲ್ಲಿ ಕ್ರಿಕೆಟಿಗ ಅಜಿಂಕ್ಯ ರಹಾನೆ

    ಸೂರತ್​​ನಲ್ಲಿರುವ ಈ ನಕಲಿ ಕಂಪನಿಯ ಹೆಸರು ಜೆನಿಕ್​ ಫಾರ್ಮಾ. ಇಲ್ಲಿಂದ ಅಹಮದಾಬಾದ್​ಗೆ ನಕಲಿ ಟೋಸಿಲಿಜುಮಾ ಚುಚ್ಚುಮದ್ದನ್ನು ಪೂರೈಕೆ ಮಾಡುತ್ತಿದ್ದರು.

    ಕೊವಿಡ್​-19 ಇರುವ ಸಂದರ್ಭದಲ್ಲಿ ಸುಲಭವಾಗಿ ಹಣ ಗಳಿಸಲು ಆರೋಪಿಗಳು ಈ ಮಾರ್ಗ ಕಂಡುಕೊಂಡಿದ್ದರು. ಇವರು ಪೂರೈಕೆ ಮಾಡಿದ ಔಷಧಿಯನ್ನು ಪಡೆದ ಖಾಸಗಿ ಆಸ್ಪತ್ರೆಯ ವೈದ್ಯರೋರ್ವರು ಫುಡ್​ ಆ್ಯಂಡ್​ ಡ್ರಗ್​ ಕಂಟ್ರೋಲ್​ ಅಥೊರಿಟಿಗೆ ದೂರು ನೀಡಿದ್ದರು. ತನಿಖೆಯ ಬಳಿಕ ಸತ್ಯ ಹೊರಬಿದ್ದಿದೆ. ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಬಂಗಾಳದಲ್ಲಿ ಬಂಗಾಳಿಗಳ ಆಡಳಿತವಿರಬೇಕೆ ಹೊರತು ಗುಜರಾತಿಗಳದ್ದಲ್ಲ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts