ಬೆಂಗಳೂರು:
ತುಮಕೂರು ನಗರದ ವರವಲಯದಲ್ಲಿರುವ ವರಿನ್ ಅಂತರ ರಾಷ್ಟ್ರೀಯ ವಸತಿ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ವರಿನ್ ಶಾಲೆಯ ಪೂರ್ವ ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ಹಂತದ ವಿದ್ಯಾರ್ಥಿಗಳು ಕೃಷ್ಣ ರಾಧೆಯರ ವೇಷ ಧರಿಸಿ ನೃತ್ಯ ಪ್ರದರ್ಶನ ನೀಡಿದರು. ಶಾಲೆಯ ಅಂಗಳ ಕೃಷ್ಣಮಯವಾಗಿ ಸಾಂಸ್ಕೃತಿಕ ರಂಗವನ್ನು ಮಕ್ಕಳಿಗೆ ಪರಿಚಯಿಸಿತು.
ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು ನೃತ್ಯ,ಗೀತೋಪದೇಶ, ಕೃಷ್ಣ ಕಥನದ ಮೂಲಕ ಕಾರ್ಯಕ್ರಮ ನೀಡಿದರು.
ಈ ಸಂದರ್ಭದಲ್ಲಿ ವರಿನ್ ಶಾಲೆಯ ಪದಾಧಿಕಾರಿಗಳಾದ ಕೃಷ್ಣಯ್ಯ, ಕಾರ್ಯದರ್ಶಿಗಳಾದ ಮಮತಾ ಸುರೇಶ್, ಟ್ರಸ್ಟಿಗಳಾದ ಅಮ್ಮ ಜಮಾ, ಪ್ರಾಂಶುಪಾಲರಾದ ಶಿವಕುಮಾರ ಎಸ್.ಕೆ.
ಪಾಲ್ಗೊಂಡಿದ್ದರು.