VIDEO: ಮನೆಯಲ್ಲಿಯೇ ಇದ್ದರೆ ಸಾಕು, ಅದುವೇ ಸುರಕ್ಷತೆ.: ಶ್ರೀ ಗುರುವಾಣಿಯಲ್ಲಿ ವಿವರಿಸಿದ್ದಾರೆ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ

Guruji 19 Epril 20
Published on

ಬೆಂಗಳೂರು: ಕರೊನಾ ವೈರಸ್ ಸೋಂಕು ಹರಡುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಬದುಕು ಹೇಗಿರಬೇಕು ಎಂಬ ಬಗ್ಗೆ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಿತ್ಯವೂ ವಿವರಣೆ ನೀಡುತ್ತಿದ್ದಾರೆ. ಈ ಕಾರ್ಯಕ್ರಮವು ದಿಗ್ವಿಜಯ 24X7 ನ್ಯೂಸ್​ನಲ್ಲಿ ಬೆಳಗ್ಗೆ ಶ್ರೀ ಗುರುವಾಣಿ- ಕರೊನಾ ಸಾಂತ್ವನ ಎಂಬ ಹೆಸರಿನಲ್ಲಿ ಪ್ರಸಾರವಾಗುತ್ತಿದೆ. ಇಂದಿನ ಎಪಿಸೋಡಿನಲ್ಲಿ ಅವರು, ಆರೋಗ್ಯಕರ ಬದುಕಿನ ಬಗ್ಗೆ ವಿವರಣೆ ನೀಡಿದ್ದಾರೆ.

ಶ್ಲೇಷ್ಮಕ್ಕೂ ದುರ್ಜನರಿಗೂ ಹತ್ತಿರದ ಹೋಲಿಕೆ ಇದೆ. ಸಿಹಿ ಪದಾರ್ಥಗಳನ್ನು ತಿಂದರೆ ಶ್ಲೇಷ್ಮ ಅಂದರೆ ಕಫ ಜಾಸ್ತಿಯಾಗುತ್ತದೆ. ಸಿಹಿಯಾಗಿ ಮಾತನಾಡಿದರೆ ದುರ್ಜನರು ಇನ್ನಷ್ಟು ರೊಚ್ಚಿಗೇಳುತ್ತಾರೆ. ಕಟುವಾಗಿ ಮಾತನಾಡಿದರೆ ದುರ್ಜನರು ಮೆತ್ತಗಾಗುತ್ತಾರೆ. ಮೆತ್ತಗೆ ಇರುವ ಮೇಕೆಯನ್ನು ಬಲಿ ಕೊಡುತ್ತಾರೆಯೇ ಹೊರತು ಘರ್ಜಿಸುವ ಹುಲಿಯನ್ನು ಬಲಿಕೊಡುವುದಿಲ್ಲ. ಈ ಮಾತು ಈಗಿನ ಕಾಲಕ್ಕೂ ಅನ್ವಯ ಎಂಬುದನ್ನು ಸ್ವಾಮೀಜಿ ನೆನಪಿಸಿದರು.

ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆ ಪೆಟ್ಟು ಅಂತ ಒಂದು ಮಾತಿದೆ. ಹಸುಗಳಾದರೂ ದೊಣ್ಣೆ ಪೆಟ್ಟಿಗೆ ಬಗ್ಗಬಹುದೇನೋ ಆದರೆ, ದುರ್ಜನರು ಬಗ್ಗಲ್ಲ. ದುರ್ಜನರು ದುರ್ಗುಣಗಳ ರಾಶಿಯಿಂದ ಕೂಡಿರುತ್ತಾರೆ. ಕಬ್ಬಿಣದ ಮೇಲಿನ ತುಕ್ಕು ಬಿಡಬೇಕಾದರೆ ಹುಳಿರಸ ಬೀಳಬೇಕು. ಕಟು ಮಾತಿನಲ್ಲಿ ದುರ್ಜನರಿಗೆ ಬುದ್ಧಿ ಹೇಳಬೇಕಾಗುತ್ತದೆ ಎಂಬುದನ್ನು ಸ್ವಾಮೀಜಿ ವಿವರಿಸಿದ್ದಾರೆ.

ಆರೋಗ್ಯದ ವಿಷಯದಲ್ಲಿ ಎಲ್ಲರೂ ಕಾಳಜಿ ವಹಿಸಬೇಕು. ಆಹಾರ ಸೇವನೆಯಲ್ಲೂ ಹಿರಿಯರು ಪಾಲಿಸುತ್ತಿದ್ದ ನಿಯಮಗಳನ್ನು ಈಗಲೂ ಪಾಲಿಸಬೇಕು. ಬಿಸಿ ನೀರು ಕುಡಿಯಬೇಕು. ಬೇರೊಬ್ಬರ ಜತೆ ಮಾತನಾಡುವಾಗ ಬಾಯಿಗೆ ಕೈ ಅಡ್ಡ ಹಿಡಿದುಕೊಳ್ಳಬೇಕು. ಇದು ಸಾಮಾಜಿಕ ಆರೋಗ್ಯ ಕಾಪಾಡಲು ಅಗತ್ಯ ಎಂಬುದನ್ನು ಸ್ವಾಮೀಜಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಪ್ರವಚನದ ಪೂರ್ಣ ವಿವರಕ್ಕಾಗಿ ಕೆಳಗಿನ ವಿಡಿಯೋ ನೋಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net