

ಕರೊನಾ ಸೋಂಕು ಹರಡದಂತೆ ತಡೆಯಲು ದೇಶಾದ್ಯಂತ ನಾನಾ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲೆಡೆ ನಡೆದಿದೆ. ಇದೇ ವೇಳೆ ಮೈಸೂರಿನ ಅವಧೂತ ದತ್ತಪೀಠಂನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಿತ್ಯವೂ ದಿಗ್ವಿಜಯ ನ್ಯೂಸ್ನಲ್ಲಿ ಬೆಳಗ್ಗೆ ಚುಟುಕು ಪ್ರವಚನ ನೀಡುತ್ತಿದ್ದಾರೆ. ವ್ಯಕ್ತಿಗತ ಶುಚಿತ್ವ ಪಾಲನೆ ಎಷ್ಟು ಅನಿವಾರ್ಯ ಎಂಬುದನ್ನು ಇಂದಿನ ಶ್ರೀಗುರುವಾಣಿಯಲ್ಲಿ ವಿವರಿಸಿದ್ದಾರೆ.
ಕರೊನಾ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಎಲ್ಲರೂ ಹೇಳುತ್ತಿದ್ದಾರೆ. ನಾವು ಧರಿಸುವ ವಸ್ತ್ರ ಶುಭ್ರವಾಗಿರಬೇಕು. ಒಂದು ಸಲ ಮೈ ಮೇಲೆ ಧರಿಸಿದ ಉಡುಪನ್ನು ತೊಳೆಯದೇ ಮತ್ತೆ ಉಪಯೋಗಿಸಬಾರದು ಎನ್ನುತ್ತಾರೆ. ಈಗ ಇವರೆಲ್ಲ ಏನು ಹೇಳುತ್ತಾರೋ ಅದೆಲ್ಲವೂ ಮಹಾಭಾರತದಲ್ಲಿದೆ. ಮಹಾಭಾರತದಲ್ಲಿ ಇಲ್ಲದ ವಿಷಯಗಳೇ ಇಲ್ಲ ಎಂಬುದನ್ನು ವ್ಯಾಸ ಮಹರ್ಷಿಗಳು ಸಾರಿ ಹೇಳಿದ್ದಾರೆ. ಹದಿನೆಂಟು ಪರ್ವಗಳ ಮಹಾಭಾರತದಲ್ಲಿ ಯುದ್ಧವೊಂದೇ ಅಲ್ಲ. ಯುದ್ಧದ ವಿವರಣೆ ಇರುವುದು ಕೇವಲ 5 ಪರ್ವಗಳಲ್ಲಿ ಮಾತ್ರ. ಉಳಿದ 13 ಪರ್ವಗಳಲ್ಲಿ ಬೇರೆ ಬೇರೆ ವಿಷಯಗಳಿವೆ. ಅವುಗಳ ಪೈಕಿ ವ್ಯಕ್ತಿಗತ ಶುಚಿತ್ವದ ಬಗ್ಗೆ ನಮ್ಮಲ್ಲಿ ಅರಿವು ಮೂಡಿಸುವುದು ಅನುಶಾಸನ ಪರ್ವ.
ಇದರಲ್ಲಿ ವ್ಯಕ್ತಿಗತ ಶುಚಿತ್ವ ಹೇಗಿರಬೇಕು ಎಂಬ ವಿವರಣೆ ಇದೆ. ಎಷ್ಟರ ಮಟ್ಟಿಗೆ ಇರಬೇಕು ಎಂಬುದನ್ನೂ ಇಲ್ಲಿ ವಿವರಿಸಲಾಗಿದೆ. ಆ ವಿವರಗಳನ್ನು ಸ್ವಾಮೀಜಿಯವರು ಇಂದಿನ ಗುರುವಾಣಿಯಲ್ಲಿ ವಿವರಿಸಿದ್ದು ಪೂರ್ಣಪಾಠಕ್ಕಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಬಹುದು.