ಯೋಗಾಸನದಿಂದ ಏಕಾಗ್ರತೆ ಹೆಚ್ಚಳ

sgr yoga
ಸಾಗರದಲ್ಲಿ ಶ್ರೀ ಗುರು ಸಹನಾ ಯೋಗ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಯೋಗ ಗುರು ಸಂಧ್ಯಾ ಅವರನ್ನು ಸನ್ಮಾನಿಸಲಾಯಿತು.
Published on

ಸಾಗರ: ಯೋಗಾಸನ ಅಭ್ಯಾಸ ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ, ಅದು ಮನಸ್ಸಿನ ಏಕಾಗ್ರತೆ ಹಾಗೂ ಆತ್ಮವಿಶ್ವಾಸಕ್ಕೆ ಸಹಕಾರಿಯಾಗಿದೆ ಎಂದು ಅಂತಾರಾಷ್ಟ್ರೀಯ ಯೋಗಪಟು ಎಂ.ಎಸ್.ಸಂಧ್ಯಾ ಹೇಳಿದರು.
ನಗರದಲ್ಲಿ ಚಿಕ್ಕ ಮಕ್ಕಳಿಗಾಗಿ ಆರಂಭಿಸಲಾದ ಶ್ರೀ ಗುರು ಸಹನ ಯೋಗ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿ, ಕ್ರಿಯಾಶೀಲ ಬದುಕಿಗೆ ಯೋಗ ಅತ್ಯಗತ್ಯ ಎಂದರು.
ಬಾಲ್ಯದಲ್ಲೇ ಯೋಗಾಸನ ಅಭ್ಯಾಸ ಮಾಡಿಕೊಳ್ಳಬೇಕು. ಇದು ಅವರ ಸರ್ವಾಂಗೀಣ ಬೆಳವಣಿಗೆಗೆ ಪೂರಕ. ಯೋಗದಿಂದ ಏಕಾಗ್ರತೆ ಹೆಚ್ಚುವುದರಿಂದ ವಿದ್ಯಾಭ್ಯಾಸಕ್ಕೂ ಅನುಕೂಲವಾಗಲಿದೆ. ಮಕ್ಕಳು ಯೋಗ ಕೇಂದ್ರದ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.
ಪ್ರಾಧ್ಯಾಪಕ ಎಲ್.ಎಂ.ಹೆಗಡೆ ಮಾತನಾಡಿ, ಯೋಗಗುರು ರಾಜೇಶ್ ಅವರ ನೇತೃತ್ವದಲ್ಲಿ ಆರಂಭಗೊಂಡ ಯೋಗ ಕೇಂದ್ರ ಮುಂದೊಂದು ದಿನ ಪ್ರತಿ ಬಡಾವಣೆಯಲ್ಲೂ ಆರಂಭಗೊಳ್ಳುವಂತಾಗಲಿ. ಪ್ರತಿಯೊಬ್ಬರೂ ಯೋಗದ ಮಹತ್ವ ಅರಿತುಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಯೋಗಪಟು ಸಂಧ್ಯಾ ಎಂ.ಎಸ್.ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜೈ ಗುರುದೇವ್ ಯೋಗ ಕೇಂದ್ರದ ಸಂಚಾಲಕ ಜಿ.ಕೆ.ಕೃಷ್ಣಮೂರ್ತಿ, ಸದಸ್ಯರಾದ ಸಂಧ್ಯಾ, ದಾಕ್ಷಾಯಿಣಿ, ಶಾರದಾ, ದಾಮೋದರ ಹಾರ್ಡ್‌ವೇರ್‌ನ ಸಂಧ್ಯಾ, ಪ್ರಾಧ್ಯಾಪಕ ರಾಜೇಶ್, ಪ್ರವೀಣ್ ರಾಯ್ಕರ್, ತಿಮ್ಮಪ್ಪ, ಲಕ್ಷ್ಮಣ್ ಇತರರಿದ್ದರು. ಯೋಗಗುರು ಸಂಧ್ಯಾ ಅವರ ಶಿಷ್ಯರು ಯೋಗಾಸನ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net