ಶ್ರೀ ಗಂಗಾಧರೇಶ್ವರಸ್ವಮಿ ಬ್ರಹ್ಮರಥೋತ್ಸವ

HSN Nugge Jatre
Published on

ನುಗ್ಗೇಹಳ್ಳಿ: ಹೋಬಳಿಯ ಸಂತೆಶಿವರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಗಂಗಾಧರೇಶ್ವರ ಸ್ವಾಮಿ ಬ್ರಹ್ಮರಥೋತ್ಸವವು ಶ್ರೀ ರಾಮನವಮಿಯ ದಿನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ರಾತ್ರಿ ಪ್ರಮುಖ ಬೀದಿಗಳಿಗೆ ವಿಶೇಷ ದೀಪಾಲಂಕಾರ ಮಾಡಲಾಗಿತ್ತು. ಗಿರಿಜಾ ಕಲ್ಯಾಣೋತ್ಸವ, ಕೃಷ್ಣ ಗಂಧೋತ್ಸವ, ಪಡಿ ಸೇವೆ, ಬೆಳಗ್ಗೆ ರಥಕ್ಕೆ ಮಹಾ ನೈವೇದ್ಯ, ಹೂವಿನ ಅಲಂಕಾರದೊಂದಿಗೆ ಶುಭ ಮುಹೂರ್ತದಲ್ಲಿ ರಥೋತ್ಸವ ನೆರವೇರಿತು.

ಬೆಂಗಳೂರು ಹಾಗೂ ಸಂತೆಶಿವರ ಗ್ರಾಮದ ಸುತ್ತಲಿನ ಯಾಚನಘಟ್ಟ, ಗಂಗೇನಳ್ಳಿ, ಗಂಜಿಗೆರೆ, ಬೆಳಗುಲಿ, ಉಲ್ಲೇನಹಳ್ಳಿ, ದುಗ್ಗೇನಹಳ್ಳಿ ಚನ್ನಗೋನಹಳ್ಳಿ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಪೂಜೆ ಸಲ್ಲಿಸಿ ರಥಕ್ಕೆ ದವನ ಹಣ್ಣು ಎಸೆಯೋ ಮೂಲಕ ಭಕ್ತಿ ಸಮರ್ಪಿಸಿದರು.

ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಪಾನಕ, ಫಲಾಹಾರ, ಅನ್ನದಾಸೋಹ ಪ್ರಸಾದ ವಿತರಿಸಲಾಯಿತು. ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಪಟೇಲ್ ರಾಜಣ್ಣ, ಎಸ್.ಎ.ಅನಂತರಾಮು, ಎಸ್.ಎಲ್.ಕೃಷ್ಣಪ್ರಸಾದ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಧು ಪಟೇಲ್, ನಾಗರತ್ನಾ, ನಿಂಗಮ್ಮ, ಮುಖಂಡರಾದ ರವೀಶ್, ಬೀರೇಗೌಡ, ರಾಮು, ಪಶುವೈದ್ಯ ಧನಂಜಯ, ಸತೀಶ್, ಮೋಹನ್, ಮೋಕ್ಷಿತ್, ಎಸ್.ಎಸ್.ನಿಂಗರಾಜ್, ನಾಗೇಶ್, ಸಿದ್ದಲಿಂಗಸ್ವಾಮಿ (ಅಮೃತ ಮಹಲ್) ದೀಪು, ಪ್ರಜ್ವಲ್, ನಂದನ್, ಎಸ್.ಎನ್.ಹೇಮಂತ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net