

ಎಚ್.ಡಿ.ಕೋಟೆ(ಹ್ಯಾಂಡ್‌ಪೋಸ್ಟ್): ಶ್ರೀ ಚಂದ್ರಮೌಳೇಶ್ವರ ಮಲ್ಲಿಕಾರ್ಜುನಸ್ವಾಮಿ ಐತಿಹಾಸಿಕ ಜಾತ್ರಾ ಮತ್ತು ರುದ್ರ ಕೊಂಡೋತ್ಸವ.
ಮಾದಾಪುರ ಮಠ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಐತಿಹಾಸಿಕ ಜಾತ್ರಾ ಮತ್ತು ರುದ್ರಕೊಂಡ ಮಹೋತ್ಸವಕ್ಕೆ ಚಾಲನೆ ನೀಡಿದರು. ರುದ್ರ ಕೊಂಡ ಮಹೋತ್ಸವಕ್ಕೆ ಕಪಿಲ ನದಿಯಿಂದ ಗಂಗೆ ಪೂಜೆ ಮಾಡಿ ರಥವನ್ನು ಸಾವಿರಾರು ಭಕ್ತರು ತೇರನ್ನು ಎಳೆದು, ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಮೆರವಣಿಗೆಯಲ್ಲಿ ದೀಪಾಲಂಕಾರ, ಡೋಲು, ವಾದ್ಯ, ಚಂಡೆ, ಗೊಂಬೆ ಕುಣಿತ, ದೇವರ ಪಟಗಳು ಮೆರವಣಿಗೆಗೆ ಮೆರುಗು ಕೊಟ್ಟವು.
ದೇವಸ್ಥಾನದ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಹೋಮ, ಹವನ, ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ಪಾರ್ಚನೆ, ಹಾಲರವಿ ಸೇವೆ, ಪೂಜೆ ಮತ್ತು ಅಭಿಷೇಕ ನಡೆಯಿತು.
ಮಾದಾಪುರ ಗ್ರಾಮಸ್ಥರು, ದೇವರಾಜ್ ಕಾಲನಿಯ ನಿವಾಸಿಗಳು, ಸುತ್ತಮುತ್ತಲ ಸಹಸ್ರರು ಭಕ್ತಾದಿಗಳು ದೇವರ ಆಶೀರ್ವಾದ ಪಡೆದರು.