ಶ್ರೀ ಬಸವೇಶ್ವರಸ್ವಾಮಿ ಕೊಂಡ ಮಹೋತ್ಸವ

16M.D.R.6
ಮದ್ದೂರು ಪಟ್ಟಣದ ಶಿವಪುರದ ಶ್ರೀ ಬಸವೇಶ್ವರ ಸ್ವಾಮಿ ಕೊಂಡ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
Published on

ಮದ್ದೂರು: ಪಟ್ಟಣದ ಶಿವಪುರದ ಶ್ರೀ ಬಸವೇಶ್ವರಸ್ವಾಮಿ ಕೊಂಡ ಮಹೋತ್ಸವ ಮಂಗಳವಾರ ಬೆಳಗ್ಗೆ ವಿಜೃಂಭಣೆಯಿಂದ ನಡೆಯಿತು.

ಅರ್ಚಕ ಮಹೇಶ್‌ರವರು ದೇವರ ಪಟ್ಟ ಹೊತ್ತು ನೆರೆದಿರುವ ಜನಗಳ ಜಯಘೋಷದೊಂದಿಗೆ ಅತಿ ಯಶಸ್ವಿಯಾಗಿ ಕೊಂಡ ಹಾಯ್ದುರು. ಕೊಂಡೋತ್ಸವ ಅಂಗವಾಗಿ ಊರಿನ ಪ್ರಮುಖ ಬೀದಿಗಳ ಉದ್ದಕ್ಕೂ ದೀಪಾಲಂಕಾರವನ್ನು ಮಾಡಿದ್ದು ನೋಡುಗರ ಗಮನ ಸೆಳೆಯಿತು. ಕೊಂಡೋತ್ಸವ ಹಿನ್ನೆಲೆಯಲ್ಲಿ ದೇಗುಲದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಿತು. ಭಕ್ತಾಧಿಗಳು ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net