ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನಿತ್ಯ ಅನ್ನದಾನ

downloaddddd
Published on

ಚಿತ್ರದುರ್ಗ: ನಗರದ ಮೆದೇಹಳ್ಳಿ ರಸ್ತೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಾಲೆ ಹಾಕಿದ ಸ್ವಾಮಿಗಳಿಗೆ ನ.16 ರಿಂದ ಜನವರಿ 13ರವರೆಗೆ ನಿ ತ್ಯ ಅನ್ನದಾನ ಕಾರ‌್ಯಕ್ರಮ ಏರ್ಪಡಿಸಲಾಗಿದೆ. 16ರಂದು ಮಧ್ಯಾಹ್ನ 12.45ಕ್ಕೆ ಮಾಜಿ ಎಂಎಲ್‌ಸಿ ರಘು ಆಚಾರ್ ಕಾರ‌್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಶರಣ್‌ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

16ರಂದು ಬೆಳಗ್ಗೆ 11 ಗಂಟೆಗೆ ಗಣಹೋಮ ಹಾಗೂ ಚಂಡಿಕಾ ಹೋಮವಿರುತ್ತದೆ. 12ರಿಂದ 20ರವರೆಗೆ ಬ್ರಹ್ಮೋತ್ಸವ ಕಾರ‌್ಯಕ್ರಮ ಗಳು ಜರುಗಲಿವೆ. 17ರಂದು ಸಂಜೆ 7ಕ್ಕೆ ಶ್ರೀ ಅಯ್ಯಪ್ಪಸ್ವಾಮಿ ಪಡಿ ಪೂಜೆ,ಡಿಸೆಂಬರ್ 25ರಂದು ಮಧ್ಯಾಹ್ನ 12ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ಮಹಾಅನ್ನದಾನ ಕಾರ‌್ಯಕ್ರಮ ಹಾಗೂ ಜನವರಿ 13ರಂದು ಸಂಜೆ 5.30ಕ್ಕೆ ಸ್ವಾಮಿ ಸನ್ನಿಧಿಯಲ್ಲಿ ದೀಪೋತ್ಸವ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net