ಶ್ರೀ ಆಂಜನೇಯ ಸ್ವಾಮಿ ದೇವರ ಮೂತಿರ್ ಪ್ರತಿಷ್ಠಾಪನೆ

je721538035802367-abc
Published on

ರಾಣೆಬೆನ್ನೂರ: ಇಲ್ಲಿಯ ಎಪಿಎಂಸಿ ಮಾರುಕಟ್ಟೆ ಆವರಣದ ಶ್ರೀ ಗಣೇಶ ದೇವಸ್ಥಾನದ 50ನೇ ವರ್ಷದ ಸವಿನೆನಪಿಗಾಗಿ ನೂತನವಾಗಿ ನಿಮಿರ್ಸಿದ ಶ್ರೀ ಆಂಜನೇಯ ಸ್ವಾಮಿ, ನವಗ್ರಹ, ನಾಗದೇವರ ಪ್ರಾಣ ಪ್ರತಿಷ್ಠಾಪನೆ ಮತ್ತು ದೇವಸ್ಥಾನಗಳ ಉದ್ಘಾಟನೆ ಸಮಾರಂಭ ಏ. 30ರಂದು ಜರುಗಲಿದೆ ಎಂದು ವರ್ತಕರ ಸಂದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 24ರಂದು ನೂತನವಾಗಿ ನಿಮಿರ್ಸಿದ ಶ್ರೀ ಆಂಜನೇಯ, ನವಗ್ರಹ ಹಾಗೂ ನಾಗದೇವರ ಮೂತಿರ್ಗಳನ್ನು ಮೆರವಣಿಗೆ ಮಾಡಲಾಗುವುದು. ಏ. 30ರಂದು ಬೆಳಗ್ಗೆ 9.30ಕ್ಕೆ ಮೂತಿರ್ಗಳ ಪ್ರಾಣಪ್ರತಿಷ್ಠಾಪನೆ ಜರುಗಲಿದೆ. ನಂತರ ರಟ್ಟಿಹಳ್ಳಿ ಕಬ್ಬಿಣಕಂತಿಮಠ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ. ಮೇ 1ರಂದು ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಪ್ರಮುಖರಾದ ವಿ.ಪಿ. ಲಿಂಗನಗೌಡ್ರ, ಗುರುಪ್ರಕಾಶ ಜಂಬಗಿ, ಶಿವಾನಂದ ಸುಣಗಾರ, ಶಿವರಾಜ ಬಾರಾಟಕ್ಕೆ, ಕರಬಸಪ್ಪ ಕೋಗಳೆ, ಮತ್ತಿತರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net