

ಆಂಧ್ರಪ್ರದೇಶ: 'ಅರ್ಜುನ್ ರೆಡ್ಡಿ' ಖ್ಯಾತಿಯ ನಟ ವಿಜಯ್ ದೇವರಕೊಂಡ ಅಭಿನಯಿಸಲಿರುವ ಮುಂದಿನ ಚಿತ್ರ 'ವಿಡಿ 12' ಬಗ್ಗೆ ಇದೀಗ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದು, ಸಿನಿಮಾದ ನಾಯಕಿಯಾಗಿ ಶ್ರೀಲೀಲಾ ಇರಲಿದ್ದಾರೋ ಅಥವಾ ರಶ್ಮಿಕಾ ಮಂದಣ್ಣ ಎಂಟ್ರಿ ಕೊಡಲಿದ್ದಾರೋ ಎಂಬ ಪ್ರಶ್ನೆಗಳು ಸದ್ಯ ಟಾಲಿವುಡ್ ಅಂಗಳದಲ್ಲಿ ತೀವ್ರ ಚರ್ಚೆಯಾಗುತ್ತಿದೆ.
ಇದನ್ನೂ ಓದಿ:
ಇತ್ತೀಚೆಗಷ್ಟೇ ಶಿವ ನಿರ್ವಾಣ ನಿರ್ದೇಶನದ ಪ್ಯಾನ್ ಇಂಡಿಯಾ, ರೋಮ್ಯಾಂಟಿಕ್-ಕಾಮಿಡಿ ಜಾನರ್ನ 'ಖುಷಿ' ಚಿತ್ರವು ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುವುದರ ಜತೆಗೆ ಒಟಿಟಿ ಬಿಡುಗಡೆಗೂ ಲಗ್ಗೆಯಿಟ್ಟಿದೆ. ಪ್ರಸ್ತುತ ಗೌತಮ್ ತಿನ್ನನೂರಿ ನಿರ್ದೇಶನದಲ್ಲಿ ಮೂಡಿಬರಲು ಸಜ್ಜಾಗಿರುವ VD 12 ಚಿತ್ರದ ನಾಯಕಿಯಾಗಿ ಸ್ಯಾಂಡಲ್ವುಡ್ ನಟಿ ಶ್ರೀಲೀಲಾ ಅವರನ್ನು ಆಯ್ಕೆ ಮಾಡಲಾಗಿದೆ. ಆದ್ರೆ, ಈ ಬಗ್ಗೆ ಕಳೆದ ಹಲವು ದಿನಗಳಿಂದ ಸಾಕಷ್ಟು ಗೊಂದಲಗಳು ಬುಗಿಲೆದ್ದಿವೆ.
ವದಂತಿಯ ಪ್ರಕಾರ, ಶ್ರೀಲೀಲಾ ಬದಲಿಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಶ್ರೀಲೀಲಾ ಪಾತ್ರದಲ್ಲಿ ರಶ್ಮಿಕಾ ಮಿಂಚಲಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಈ ಕುರಿತಂತೆ ಸ್ಪಷ್ಟನೆ ನೀಡಿರುವ ನಿರ್ಮಾಪಕ ನಾಗ ವಂಶಿ, 'ವಿಡಿ 12' ಸಿನಿಮಾದಲ್ಲಿ ಶ್ರೀಲೀಲಾ ಅವರೇ ಹೀರೋಯಿನ್ ಆಗಿ ಉಳಿದಿದ್ದಾರೆ. ಯಾವುದೇ ಪಾತ್ರ ಬದಲಾವಣೆಗಳನ್ನು ಮಾಡುವ ಉದ್ದೇಶವಿಲ್ಲ ಎಂದು ದೃಢಪಡಿಸಿದ್ದಾರೆ,(ಏಜೆನ್ಸೀಸ್).