More

    ಬಿಜೆಪಿಯೊಂದಿಗಿನ ಮೈತ್ರಿ ಕಡಿತ; ಕೊನೆಗೂ ಮೌನ ಮುರಿದ ಎಐಎಡಿಎಂಕೆ

    ಚೆನ್ನೈ: ಬಿಜೆಪಿಯೊಂದಿಗಿನ ಮೈತ್ರಿ ಕಡಿತದ ನಿರ್ಧಾರ ನಾವು ಮಾಡಿದ್ದಲ್ಲ ಅದು ಪಕ್ಷದ ಎರಡು ಕೋಟಿ ಕಾರ್ಯಕರ್ತರು ಕೈಗೊಂಡ ನಿರ್ಣಯ ಎಂದು ತಮಿಳುನಾಡು ಮಾಜಿ ಸಿಎಂ, ಎಐಎಡಿಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಇ. ಪಳನಸ್ವಾಮಿ ಹೇಳಿದ್ದಾರೆ.

    ಬಿಜೆಪಿಯೊಂದಿಗಿನ ಮೈತ್ರಿ ಕಡಿತದ ಕುರಿತು ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಅವರು ಕಾರ್ಯಕರ್ತರ ಆಲೋಚನೆ ಹಾಗೂ ಅಭಿಪ್ರಾಯಗಳನ್ನು ಆಧರಿಸಿ ನಾವು ಎನ್​ಡಿಎ ಮೈತ್ರಿಕೂಟದಿಂದ ಹೊರಬರಲು ನಿರ್ಧರಿಸಬೇಕಾಯಿತು ಎಂದಿದ್ದಾರೆ.

    ಇದನ್ನೂ ಓದಿ: ನಾಂದೇಡ್​ ಸರ್ಕಾರಿ ಆಸ್ಪತ್ರೆ ದುರಂತ; ಮೃತರ ಸಂಖ್ಯೆ 31ಕ್ಕೆ ಏರಿಕೆ

    ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಇದು ನನ್ನೊಬ್ಬನ ನಿರ್ಧಾರವಲ್ಲ. ಇದು ಕಾರ್ಯಕರ್ತರ ನಿರ್ಧಾರವಾಗಿತ್ತು. ಕಾರ್ಯಕರ್ತರು ಕೈಗೊಂಡ ನಿರ್ಧಾರಕ್ಕೆ ನಾವು ಬದ್ದರಾಗಿದ್ದು, ಅದುವೇ ಅಂತಿಮ ತೀರ್ಮಾನವಾಗಿದೆ. ಒಂದು ವೇಳೆ ನಾವು ಮೈತ್ರಿಯಲ್ಲಿ ಮುಂದುವರೆದಿದ್ದರೆ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರೋಕ್ಷವಾಗಿ ಬೆಂಬಲಿಸಿದಂತೆ ಆಗುತ್ತದೆ. ಇದು ನಮ್ಮಿಂದ ಯಾವತ್ತೂ ಸಾಧ್ಯವಿಲ್ಲ. ನಾವು ಸದಾ ಜನರ ಧ್ವನಿಯಾಗಿ ಕೆಲಸ ಮಾಡಿದ್ದೇವೆ.

    ನಾವು ನಾಡಿನ ಜನರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮೈತ್ರಿಯಿದಮ ಹೊರನಡೆದಿದ್ದೇವೆ. ಜನರೇ ನಮ್ಮ ಪಾಲಿನ ಯಜಮಾನರು ನಾವು ಅವರ ಬಳಿಗೆ ನೇರವಾಗಿಯೇ ಹೋಗಿ ಮತ ಕೇಳುತ್ತೇವೆ. ನಾಡಿನ ಹಿತಾಸಕ್ತಿ ಕಾಪಾಡುವುದಕ್ಕೆ ನಮ್ಮ ಪಕ್ಷ ಸದಾ ಸಿದ್ದ ಎಂದು ತಮಿಳುನಾಡು ಮಾಜಿ ಸಿಎಂ, ಎಐಎಡಿಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಇ. ಪಳನಸ್ವಾಮಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts