More

    ಏಷ್ಯನ್​ ಗೇಮ್ಸ್| ಯಶಸ್ವಿ ಜೈಸ್ವಾಲ್-ರವಿ ಬಿಷ್ಣೋಯಿ ಮಿಂಚು; ನೇಪಾಳ ವಿರುದ್ಧ ಗೆದ್ದ ಭಾರತ

    ನವದೆಹಲಿ: ಚೀನಾದ ಹ್ಯಾಂಗ್​​​​​​​​​ಝೌನಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ ಪುರುಷರ ಟಿ-20 ಕ್ರಿಕೆಟ್​ ಪಂದ್ಯದಲ್ಲಿ ಭಾರತ ನೇಪಾಳ ವಿರುದ್ಧ ಕ್ವಾರ್ಟರ್​ಫೈನಲ್​ ಪಂದ್ಯದಲ್ಲಿ 23ರನ್​ಗಳ ಜಯ ಸಾಧಿಸಿದೆ.

    ಹ್ಯಾಂಗ್​ಝೌನ ಪಿಂಗ್​ಫೆಂಗ್ ಕ್ಯಾಂಪಸ್ ಕ್ರಿಕೆಟ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಭಾರತ ಆರಂಭಿಕ ಯಶಸ್ವಿ ಜೈಸ್ವಾಲ್ (100 ರನ್, 49 ಎಸೆತ, 8 ಬೌಂಡರಿ, 7 ಸಿಕ್ಸರ್) ಫಲವಾಗಿ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 202ರನ್​ ಗಳಿಸಿತ್ತು.

    ಬೃಹತ್​ ಗುರಿ ಬೆನ್ನತ್ತಿದ್ದ ನೇಪಾಳ ಉತ್ತಮ ಆರಂಭದ ಹೊರಾತ್ತಾಗಿಯೂ ಬ್ಯಾಟ್ಸ್​ಮನ್​ಗಳ ವೈಪಲ್ಯದ ಫಲವಾಗಿ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 179 ರನ್​ ಗಳಿಸಿ ಸೋಲೊಪ್ಪಿಕೊಂಡಿತ್ತು. ಭಾರತದ ಪರ ಬೌಲರ್​ಗಳಾದ ಆವೇಶ್​ ಖಾನ್ (4-0-32-3), ರವಿ ಬಿಷ್ಣೋಯಿ (4-0-24-3), ಹರ್ಷ್​ದೀಪ್​ ಸಿಂಗ್ (4-0-43-2) ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts