ಟಾಲಿವುಡ್​​ ಅಂಗಳದಲ್ಲಿ ನಟಿ ಶ್ರೀಲೀಲಾ ಸದ್ದು; 'ನೀ ಚುಟ್ಟು ಚುಟ್ಟು' ಸಾಂಗ್​ ಪ್ರೋಮೋ ರಿಲೀಸ್​

Untitled design - 2023-08-01T123958.708
Published on

ಆಂಧ್ರಪ್ರದೇಶ: ಸ್ಯಾಂಡಲ್​ವುಡ್​ ಬೆಡಗಿ ನಟಿ ಶ್ರೀಲೀಲಾ ಇದೀಗ ಟಾಲಿವುಡ್‌ ಅಂಗಳದಲ್ಲಿ ಮಿಂಚುತ್ತಿದ್ದು, ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ನಾಯಕಿಯಾಗಿ ಅಭಿನಯಿಸಿರುವ 'ಸ್ಕಂದ' ಚಿತ್ರದ 'ನೀ ಚುಟ್ಟು ಚುಟ್ಟು' ಸಾಂಗ್​ ಪ್ರೋಮೋ ಇಂದು ರಿಲೀಸ್​ ಆಗಿದ್ದು, ಹಾಡಿನಲ್ಲಿ ಜಬರ್​​ದಸ್ತ್​ ಆಗಿ ಕಾಣಿಸಿಕೊಂಡಿದ್ದಾರೆ.

ಬೋಯಪತಿ ಶ್ರೀನು ನಿರ್ದೇಶಿಸಿದ ಸ್ಕಂದ ಚಿತ್ರದ ತಯಾರಕರು ಇಂದು ಸಿನಿಮಾದ ಫಸ್ಟ್​ ಸಿಂಗಲ್, ನೀ ಚುಟ್ಟು ಚುಟ್ಟು ಹಾಡಿನ ಪ್ರೋಮೋವನ್ನು ಬಿಡುಗಡೆಗೊಳಿಸಿದ್ದಾರೆ. ಥಮನ್ ಅವರ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿನ ಸಂಪೂರ್ಣ ವಿಡಿಯೋ ಇದೇ ಆಗಸ್ಟ್ 3ರ ಬೆಳಗ್ಗೆ 09:36ಕ್ಕೆ ರಿಲೀಸ್​ ಆಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಬಿಗ್​ ಬಜೆಟ್​ ಚಿತ್ರದಲ್ಲಿ, ಶ್ರೀಲೀಲಾ ಮತ್ತು ರಾಮ್ ಪೋತಿನೇನಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ರೋಮ್ಯಾಂಟಿಕ್​-ಡ್ರಾಮಾ​ ಜಾನರ್​ ಚಿತ್ರ ಇದಾಗಿದೆ. ಈ ಚಿತ್ರವು ಸೆಪ್ಟೆಂಬರ್ 15, 2023 ರಂದು ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿ ವರದಿ ತಿಳಿಸಿದೆ,(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net