

ತೆಲುಗಿನಲ್ಲಿ ಸೂಪರ್ ಕ್ರೇಜ್ ಗಿಟ್ಟಿಸಿಕೊಂಡಿರುವ ನಾಯಕಿ ಶ್ರೀಲೀಲಾ ಸದ್ಯ ಟಾಲಿವುಡ್ ನಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಿದ್ದಾರೆ. ಶ್ರೀಲೀಲಾ ಕೈಯಲ್ಲಿ 7 ಚಿತ್ರಗಳಿವೆಯಂತೆ.
ಶ್ರೀ ಲೀಲಾ ಇದೀಗ ಬ್ಲಾಕ್ ಆಂಡ್ ವೈಟ್ ಡ್ರೆಸ್ನಲ್ಲಿ ಮಿಂಚಿದ್ದಾರೆ.
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಶನ್ನಲ್ಲಿ ಮೂಡಿ ಬರುತ್ತಿರುವ ಇನ್ನೂ ಹೆಸರಿಡದ ಚಿತ್ರ, ನಿತಿನ್ ಅಭಿನಯದ 32ನೇ ಚಿತ್ರ, ವೈಷ್ಣವ್ ತೇಜಾ ಅಭಿನಯದ 4ನೇ ಚಿತ್ರ, ಅನಗನಗಾ ಒಕ ರೋಜು ಹೀಗೆ ಸಾಲು, ಸಾಲು ಸಿನಿಮಾಗೆ ಸಹಿ ಹಾಕಿರುವ ಶ್ರೀಲೀಲಾ ಸುಮಾರು ಎರಡರಿಂದ ಮೂರು ವರ್ಷಗಳು ಫುಲ್ ಬ್ಯುಸಿ ಆಗಿದ್ದಾರೆ.
ತ್ರಿನಾದ ರಾವ್ ನಕ್ಕಿನ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾವನ್ನು ಚಿತ್ರಪ್ರೇಮಿಗಳು ಮೆಚ್ಚಿಕೊಂಡಿದ್ದಾರೆ. ರವಿತೇಜ ಅವರ ಎನರ್ಜಿಗೆ ಚಪ್ಪಾಳೆ ಸಿಕ್ಕಿದೆ. ಜೊತೆಗೆ ಹೀರೋಯಿನ್ ಶ್ರೀಲೀಲಾ ಕೂಡ ಮಿಂಚಿದ್ದಾರೆ.
2022ರ ಡಿಸೆಂಬರ್ 23ರಂದು ಶ್ರೀಲೀಲಾ ಅಭಿನಯದ ‘ಧಮಾಕಾ’ ಚಿತ್ರ ಬಿಡುಗಡೆ ಆಯಿತು. ಆರಂಭದಲ್ಲಿಯೇ ಈ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕಿದೆ.
ಧಮಾಕಾ ಸಿನಿಮಾದ ಗೆಲುವಿನಿಂದ ಅವರ ನಟಿ ಚಾರ್ಮ್ ಮತ್ತಷ್ಟು ಹೆಚ್ಚಿದೆ. ಬಿಡುಗಡೆಯಾಗಿ 14ನೇ ದಿನಕ್ಕೆ ಈ ಚಿತ್ರದ ಒಟ್ಟು ಕಲೆಕ್ಷನ್ 100 ಕೋಟಿ ರೂಪಾಯಿ ಆಗಿದೆ.
ಟಾಲಿವುಡ್ ಪ್ರೇಕ್ಷಕರಿಗೆ ಶ್ರೀಲೀಲಾ ಹೆಚ್ಚು ಇಷ್ಟ ಆಗಿದ್ದಾರೆ. ಕಿರೀಟಿ ರೆಡ್ಡಿ ನಟನೆಯ ‘ಜೂನಿಯರ್’ ಚಿತ್ರಕ್ಕೂ ಅವರೇ ನಾಯಕಿ. ಕನ್ನಡ-ತೆಲುಗು ಭಾಷೆಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.