

ನವದೆಹಲಿ: ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ನಲ್ಲಿ (
Commonwealth Games
) ಪದಕ ಗೆದ್ದ ಭಾರತದ ವೇಯ್ಟ್ಲಿಫ್ಟರ್ಗಳು ಸೋಮವಾರ ತವರಿಗೆ ಮರಳಿದಾಗ ಭವ್ಯ ಸ್ವಾಗತ ನೀಡಲಾಯಿತು. ಬಳಿಕ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ನಗದು ಬಹುಮಾನ ನೀಡಿ ಸನ್ಮಾನಿಸಿದರು.
ರಾಷ್ಟ್ರೀಯ ಕ್ರೀಡಾನೀತಿಯ ಅನ್ವಯ ಚಿನ್ನ ವಿಜೇತೆ ಮೀರಾಬಾಯಿ ಚಾನುಗೆ 30 ಲಕ್ಷ ರೂ. ವಿತರಿಸಲಾಯಿತು. ಬೆಳ್ಳಿ ವಿಜೇತರಿಗೆ 20 ಲಕ್ಷ ರೂ. ಮತ್ತು ಕಂಚು ವಿಜೇತರಿಗೆ 10 ಲಕ್ಷ ರೂ. ಬಹುಮಾನ ನೀಡಲಾಯಿತು.
"ನೀವು ಗೆದ್ದ ಪ್ರತಿ ಪದಕವೂ ದೇಶಕ್ಕೆ ಅಪಾರ ಸಂತಸ ತಂದಿದೆ. ನೀವು ಗೆದ್ದ ಪದಕಗಳ ವಿವರವನ್ನು ಪ್ರತಿದಿನ ಅಧಿವೇಶನ ಆರಂಭಕ್ಕೆ ಮುನ್ನ ಸಂಸತ್ನಲ್ಲಿ ಪ್ರಕಟಿಸಲಾಗುತಿತ್ತು. ಈ ಬಾರಿ ಪದಕ ಗೆಲ್ಲದವರು, ಕ್ರೀಡಾಪಟುಗಳು ಎಂದಿಗೂ ಸೋಲುವುದಿಲ್ಲ. ಒಂದೋ ಗೆಲ್ಲುತ್ತಾರೆ ಅಥವಾ ಮತ್ತೆ ಗೆಲ್ಲಲು ಕಲಿಯುತ್ತಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು' ಎಂದು ಮಾಂಡವೀಯ ತಿಳಿಸಿದರು.