ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ: ಪಿಎಸ್‌ಐ ನಾಗಪ್ಪ ಅಭಿಮತ

KABADDI
ಅಳವಂಡಿ ಸಮೀಪದ ರಘುನಾಥನಹಳ್ಳಿಯಲ್ಲಿ ಜೈ ಹನುಮಾನ ಸ್ಪೋರ್ಟ್ಸ್‌ನಿಂದ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಗೆ ಪಿಎಸ್‌ಐ ನಾಗಪ್ಪ ಚಾಲನೆ ನೀಡಿದರು. ಪ್ರಮುಖರಾದ ಭರಮಪ್ಪ, ತೋಟಪ್ಪ, ಅನ್ವರ, ಮುತ್ತಣ್ಣ, ತಿಪ್ಪಣ್ಣ, ಅಂಬರೀಶ ಇತರರಿದ್ದರು.
Published on

ಅಳವಂಡಿ: ಯುವಕರು ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಪಾಲ್ಗೊಳ್ಳಬೇಕು. ಕ್ರೀಡೆ ಇಲ್ಲದ ಜೀವನ ಕ್ರೀಟ ತಿಂದ ಹಣ್ಣಿನಂತೆ ಎಂದು ಪಿಎಸ್‌ಐ ನಾಗಪ್ಪ ತಿಳಿಸಿದರು.

ಸಮೀಪದ ರಘುನಾಥನಹಳ್ಳಿ ಗ್ರಾಮದಲ್ಲಿ ಜೈ ಹನುಮಾನ ಸ್ಪೋರ್ಟ್ಸ್ ಕ್ಲಬ್‌ನಿಂದ ನಾಗರ ಪಂಚಮಿ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ಬಹುಪಾಲು ಸಮಯವನ್ನು ಮೊಬೈಲ್‌ನಲ್ಲಿ ವ್ಯರ್ಥ ಮಾಡುತ್ತಿದ್ದಾರೆ. ಅವಶ್ಯಕತೆಗೆ ತಕ್ಕಂತೆ ಮೊಬೈಲ್ ಬಳಸಿ. ಓದುವ ಸಮಯದಲ್ಲಿ ಓದಿಗೆ ಸಮಯ ಮೀಸಲಿಡಿ. ಇದು ನಿಮ್ಮ ಮುಂದಿನ ಜೀವನ ರೂಪಿಸುತ್ತದೆ. ಓದಿನ ಜತೆಗೆ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಇಲ್ಲಿ ಸೋಲು-ಗೆಲುವನ್ನು ಲೆಕ್ಕಸಬೇಡಿ ಎಂದು ಸಲಹೆ ನೀಡಿದರು.

ಪ್ರಮುಖರಾದ ಭರಮಪ್ಪ ನಗರ, ಅನ್ವರ ಗಡಾದ, ತೋಟಪ್ಪ ಶಿಂಟ್ರ, ಮುತ್ತಣ್ಣ ಬೋಚನಹಳ್ಳಿ, ಜಡಿಯಪ್ಪ, ಅಂಬರೀಶ ಬೋಚನಳ್ಳಿ, ಮಲ್ಲಪ್ಪ ಕಮತರ, ರಾಜು, ಪರಶುರಾಮ ಮೆಕ್ಕಿ, ತಿಪ್ಪಣ್ಣ ಬೋಚನಳ್ಳಿ, ಹನುಮಂತ ಪೂಜಾರ, ಮುತ್ತಣ್ಣ ಬಿಸರಳ್ಳಿ, ಮೆಹಬೂಬ್, ಗೋಪಾಲ ಬಡಿಗೇರ, ಹೊನ್ನಪ್ಪಗೌಡ, ಪ್ರಕಾಶ ಇಳಿಗೇರ, ಮಂಜುನಾಥ ಹಿರೇಮಠ, ವಿರುಪಣ್ಣ, ಪೂಜಾರ ಮೆಂಬರ್, ಮಾರುತಿ, ಮರಿಯಪ್ಪ, ಸುರೇಶ, ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net