

ಎಚ್.ಡಿ.ಕೋಟೆ : ಬೆಂಗಳೂರಿನ ಎಸ್. ಎಸ್. ಫೌಂಡೇಶನ್, ಹಾರೋಜಿನ್ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ಬಿರ್ಸಾ ಮುಂಡಾ ಅವರ 148 ನೇ ಜಯಂತಿ ಅಂಗವಾಗಿ ಆದಿವಾಸಿ ಬುಡಕಟ್ಟು ಯುವಕರಿಗೆ ಭಾನುವಾರ ಪಟ್ಟಣದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ಅರಳಿಕಟ್ಟಿ ಹಾಡಿ ಪ್ರಥಮ, ಕೆ.ಆರ್. ಪುರ ಮಗ್ಗೆ ಹಾಡಿ ದ್ವಿತೀಯ ಬಹುಮಾನ ಪಡೆದವು.
ಕುಂಟೇರಿ ಹಾಡಿ ತೃತೀಯ ಮತ್ತು ಅಂಕನಾಥಪುರ ಹಾಡಿ ತಂಡ 4ನೇ ಬಹುಮಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಪಂದ್ಯಾವಳಿಗೆ ಸರಗೂರು ಮತ್ತು ಎಚ್.ಡಿ.ಕೋಟೆ ತಾಲೂಕುಗಳಿಂದ ವಿವಿಧ ತಂಡಗಳು ಭಾಗವಹಿಸಿದ್ದವು.
ಮೊದಲ ಬಹುಮಾನವಾಗಿ 15,000 ರೂ. ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ 10 ಸಾವಿರ ರೂ. ನಗದು ಮತ್ತು ಟ್ರೋಫಿ, ತೃತೀಯ ಬಹುಮಾನ 7,000 ರೂ. ಮತ್ತು ಟ್ರೋಫಿ, ನಾಲ್ಕನೇ ಬಹುಮಾನವಾಗಿ ಟ್ರೋಫಿ ಮತ್ತು ವಾಲಿಬಾಲ್ ನೆಟ್ ನೀಡಲಾಯಿತು.ವಿಎಚ್‌ಪಿ ಮುಖಂಡರಾದ ಮಾದೇವಪ್ಪ, ಸೂರ್ಯ ನಾರಾಯಣ್, ಸಂತೋಷ್, ಪ್ರಶಾಂತ್, ವಿನಯ್, ಆರ್‌ಎಸ್‌ಎಸ್ ಮತ್ತು ಬಜರಂಗ ದಳದ ಸ್ವಯಂಸೇವಕರು, ಆದಿವಾಸಿ ನಾಯಕರು ಹಾಜರಿದ್ದರು.