

ಹುಲ್ಲಹಳ್ಳಿ: ಆಟೋಟಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಸಂತ ಜ್ಯೋತಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ 3ನೇ ವರ್ಷದ ಖೋ ಖೋ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಗಳಲ್ಲಿ ಭಾಗಿಯಾಗುವುದರಿಂದ ಚೈತನ್ಯ ಲಭಿಸುತ್ತದೆ. ಇದರಿಂದ ಜೀವನ ಸುಖಮಯವಾಗುತ್ತದೆ ಎಂದರು. 10 ಆಸ್ಪತ್ರೆ ನಿರ್ಮಾಣ ಮಾಡುವುದಕ್ಕಿಂತ ಒಂದು ಕ್ರೀಡಾಂಗಣ ನಿರ್ಮಿಸುವುದು ಮೇಲು ಎಂದರು.
ಪಂದ್ಯ ವೀಕ್ಷಿಸಿದ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯಕ, ಗ್ರಾಪಂ ಅಧ್ಯಕ್ಷೆ ದೇವಮ್ಮ , ಉಪಾಧ್ಯಾಕ್ಷ ಲೋಕೇಶ, ವೈದ್ಯಾಧಿಕಾರಿ ಡಾ. ಧನಲಕ್ಷ್ಮೀ, ಜ್ಯೋತಿ ಟ್ರಸ್ಟ್ ಅಧ್ಯಕ್ಷ ಎಚ್ .ಸಿ ಮಧುಕರ , ಖೋಖೋ ಕೋಚ್ ಮಹದೇವಸ್ವಾಮಿ, ಶಿಕ್ಷಕರಾದ ದೇವರಾಜ ನಾಯಕ್ , ಮಹದೇವಸ್ವಾಮಿ ಇತರರು ಇದ್ದರು. ಇದೇ ಸಂದರ್ಭ ನಿವೃತ್ತ ಶಿಕ್ಷಕರಿಗೆ ಮತ್ತು ಹಿರಿಯ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.