ಸ್ಪಂಧನ ಕ್ರೆಡಿಟ್ ಸೌಹಾರ್ಧ ಸಹಕಾರ ಸಂಘದಲ್ಲಿ ಪ್ರತಿಭಾನ್ವಿತ ಮಕ್ಕಳು, ಹಿರಿಯ ಸಹಕಾರಿಗಳಿಗೆ ಸನ್ಮಾನ

mala1
Published on

ಬೆಂಗಳೂರು:
ಸದಸ್ಯರ ಪರಸ್ಪರ ಸಹಕಾರ ಉತ್ತಮವಾಗಿದ್ದರೆ ಮಾತ್ರ ಸೌಹಾರ್ಧ ಸಹಕಾರ ಸಂಘಗಳು ಉತ್ತಮ ಸಾಧನೆ ಮಾಡಲು ಎಂದು ಸ್ಪಂಧನ ಕ್ರೆಡಿಟ್ ಸೌಹಾರ್ಧ ಸಹಕಾರ ಸಂಘದ ಅಧ್ಯಕ್ಷ ಕರಿಯಪ್ಪ ಹೇಳಿದ್ದಾರೆ.
ಕಾಸಿಯಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಸ್ಪಂಧನ ಕ್ರೆಡಿಟ್ ಸೌಹಾರ್ಧ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯ ಬಳಿಕ ಪ್ರತಿಭಾನ್ವಿತ ಮಕ್ಕಳು ಮತ್ತು ಹಿರಿಯ ಮಹಿಳಾ ಸಹಕಾರಿಗಳು ಮತ್ತು ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
ಪ್ರತಿ ವರ್ಷವೂ ಸಾಮಾಜಿಕ ಕಾಳಜಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಸದಸ್ಯರ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ಮಾಡಲಾಗುತ್ತಿದೆ. ಸಂಘದಿಂದ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸುವ ಯೋಜನೆಯಿಂದ ಹಿಡಿದು, ಇನ್ನು ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ಮಾಲಾ ದಂಪತಿಗಳನ್ನು ಹಾಗೂ ಅವರ ಪುತ್ರ ಆಕಾಶ್ ಎಸ್ ತಗಡೂರು ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಕರಿಯಪ್ಪ, ಉಪಾಧ್ಯಕ್ಷ ಎಚ್.ಟಿ.ಶ್ರೀನಿವಾಸ್, ನಿರ್ದೇಶಕರಾದ ಪುಟ್ಟೇಗೌಡ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net