Rajinikanth - ಅಧ್ಯಾತ್ಮದ ಮುಂದೆ ಯಾವ ಸ್ಟಾರ್​ಡಂ ನಡೆಯಲ್ಲ ಎಂದ ನಟ ರಜಿನಿಕಾಂತ್​

ರಜಿನಿಕಾಂತ್​
ರಜಿನಿಕಾಂತ್​
Published on
Rajinikanth -
ಕಾಲಿವುಡ್​ ಸೂಪರ್​ಸ್ಟಾರ್​ ರಜಿನಿಕಾಂತ್​ಗೆ ದೇಶ, ವಿದೇಶಗಳಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇಂತಹ ರಜಿನಿಕಾಂತ್​ ಸಾರ್ವಜನಿಕವಾಗಿ ಓಡಾಡುವುದು ಕಷ್ಟ. ಅವರು ಇಂತಹ ಜಾಗಕ್ಕೆ ಬರುತ್ತಾರೆ ಅಂತ ತಿಳಿದ ತಕ್ಷಣ ಅಲ್ಲಿ ಕ್ಷಣಾರ್ಧದಲ್ಲೇ ನೂರಾರು ಜನ ಸೇರುತ್ತಾರೆ. ಆದರೆ, ಸ್ಟಾರ್​ಡಂಗಿಂತಲೂ ಮಿಗಿಲಾದುದು ಆಧ್ಯಾತ್ಮ ಎನ್ನುತ್ತಾರೆ ರಜಿನಿ. ಅದಕ್ಕೆ ಕಾರಣ, ಅವರಿಗೆ ಆದ ಅನುಭವವಂತೆ.
ಇತ್ತೀಚೆಗಷ್ಟೆ ಶ್ರೀ ಶ್ರೀ ರವಿಶಂಕರ್​ ಗುರೂಜಿ ಅವರ 70ನೇ ಹುಟ್ಟುಹಬ್ಬ ಆಚರಿಸಲು ಆರ್ಟ್​ ಆಫ್​ ಲಿವಿಂಗ್​ಗೆ ಆಗಮಿಸಿದ್ದ ಅವರು, "ಹಿಮಾಲಯದ ಬಳಿಕ ಈ ಆಶ್ರಮ ನನಗೆ ಎರಡನೇ ಅಚ್ಚುಮೆಚ್ಚಿನ ತಾಣ. ಮೊದಲ ಬಾರಿ ಕೇವಲ 2 ದಿನ ಇಲ್ಲಿರಲು ಬಂದಿದ್ದವನು, 15 ದಿನ ಇದ್ದೆ. ಆ ಸಮಯದಲ್ಲಿ ಗುರೂಜಿ ಪೂಜೆಗೆ ಬರಲು ತಿಳಿಸಿದರು. ಅಂದು ವಿಶೇಷ ದಿನವಾದ ಕಾರಣ ಎಂದಿಗಿಂತ ಹೆಚ್ಚು ಜನ ಸೇರಿರುತ್ತಾರೆ. ನನ್ನನ್ನು ನೋಡಿ ಫೋಟೋ, ಆಟೋಗ್ರಾಫ್​ ಬೇಕು ಅಂತ ಸುತ್ತುವರಿಯಬಹುದು. ಹೀಗಾಗಿ ನನ್ನಿಂದ ಪೂಜೆಗೆ ಸಮಸ್ಯೆ ಆಗಬಹುದು ಅಂತ ಮೊದಲು ಹಿಂಜರಿದಿದ್ದೆ. ಆದರೆ, ಪೂಜೆಗೆ ಹೋದಾಗ ಫೋಟೋ, ಆಟೋಗ್ರಾಫ್​ ಇರಲಿ ಒಬ್ಬರೂ ನನ್ನನ್ನು ಕಣ್ಣೆತ್ತಿಯೂ ನೋಡಲಿಲ್ಲ. ಈ ಅನುಭವ ನನ್ನ ಅಹಂಅನ್ನು ಸಂಪೂರ್ಣವಾಗಿ ನೆಲಸಮ ಮಾಡಿತು. ಇದು ಹೇಗೆ ಸಾಧ್ಯ ಅಂತ ಡಿಸ್ಟರ್ಬ್​ ಕೂಡ ಆಗಿದ್ದೆ. ಆದರೆ, ಅಂದು ನನಗೆ ಅಧ್ಯಾತ್ಮದ ನಿಜವಾದ ಶಕ್ತಿಯ ಅರಿವಾಯಿತು. ಬೇರೆಲ್ಲ ಬಗೆಯ ಸ್ಟಾರ್​ಡಂಗಳು ಬರುತ್ತವೆ, ಹೋಗುತ್ತವೆ. ಆದರೆ, ಅಧ್ಯಾತ್ಮದ ಸ್ಟಾರ್​ಡಂ ಎಲ್ಲಕ್ಕಿಂತ ಅತ್ಯುನ್ನತವಾದುದು. ಅದಕ್ಕೆ ಕೊನೆಯೇ ಇಲ್ಲ' ಎಂದಿದ್ದಾರೆ. ಸದ್ಯ ಅವರ ಭಾಷಣದ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net