

ಶ್ರೀನಗರ: 200ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೆಹಲಿ ಹಾಗೂ ಶ್ರೀನಗರ ಸ್ಪೈಸ್‌ಜೆಟ್ ವಿಮಾನವು ಇಂದು (ಆ.29) ಶ್ರೀನಗರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
(ಏಜೆನ್ಸೀಸ್)
ತಾಂತ್ರಿಕ ದೋಷ ಕಂಡು ಬಂದ ಪರಿಣಾಮ, ವಿಮಾನವು ಪ್ರಯಾಣಿಕರಿಗೆ ಅಥವಾ ಸಿಬ್ಬಂದಿಗೆ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಇಳಿಯಿತು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. SG 385 ವಿಮಾನವು ದೆಹಲಿಯಿಂದ ಶ್ರೀನಗರಕ್ಕೆ 205 ಪ್ರಯಾಣಿಕರೊಟ್ಟಿಗೆ ಹೊರಟಿತ್ತು, ಅವರಲ್ಲಿ ನಾಲ್ವರು ಮಕ್ಕಳು ಮತ್ತು ಏಳು ಸಿಬ್ಬಂದಿ ಇದ್ದರು. ಸಿಬ್ಬಂದಿ ಲ್ಯಾಂಡಿಂಗ್ಗಾಗಿ ವಿನಂತಿಸುವ ವರದಿ ಮಾಡಿದರು. ಹಾಗಾಗಿ ವಿಮಾನವು ಮಧ್ಯಾಹ್ನ 3:27 ಕ್ಕೆ ಸುರಕ್ಷಿತವಾಗಿ ಇಳಿಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನೂ ವಿಮಾನವನ್ನು ಅಗತ್ಯ ತಪಾಸಣೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ.