ಪ್ರೇಮಾನಂದ ಮಹಾರಾಜ್​ನಂತೆ ಹೋಲುವ ಗಣೇಶ ವಿಗ್ರಹಗಳನ್ನು ರಚಿಸಿದ ಕಲಾವಿದ!​|Ganesh

untitled-design-2025-08-29t183008820-68b1a46402976
Published on

Ganesh : ಪ್ರಪಂಚದಾದ್ಯಂತ ಗಣೇಶ ಚತುರ್ಥಿಯನ್ನು ಆಚರಿಸುತ್ತಿದ್ದು, ಮಾರುಕಟ್ಟೆಯಲ್ಲಿ ವಿಧವಿಧವಾದ ಗಣೇಶನ ಮೂರ್ತಿಗಳನ್ನು ನಾವು ನೋಡಬಹುದು. ಪ್ರತಿ ವರ್ಷ ವಿಭಿನ್ನವಾದ ಗಣಪತಿಗಳನ್ನು ನಾವು ಗಮನಿಸಬಹುದು. ಹಾಗೆಯೇ ಕಲಾವಿದರು ಯಾವ ರೀತಿಯ ವಿಗ್ರಹಗಳನ್ನು ತಯಾರಿಸುತ್ತಾರೆ ಎಂದು ಕುತೂಹಲದಿಂದ ಕುಳಿತಿರುವುದ್ದೇವೆ. ಈ ವರ್ಷದ ಮಧ್ಯಪ್ರದೆಶದ ಕಲಾವಿದರೊಬ್ಬರು ತಯಾರಿಸಿದ ಗಣಪತಿ ವಿಗ್ರಹವು ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರಿಂದ ಸ್ಫೂರ್ತಿ ಪಡೆದಿದ್ದು, ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: ಪಾಲಿಕೆಯಿಂದ ಮಣ್ಣಿನ ಗಣೇಶ ಮೂರ್ತಿ ಸಿದ್ಧಪಡಿಸುವ ಕಾರ್ಯಾಗಾರ -ಪಾಲಿಕೆಯಿಂದ ಬದಲಾವಣೆ ಪರ್ವ ಪ್ರಾರಂಭ- ಸಚಿವ ಹಾಗೇ ಮಹಾರಾಷ್ಟ್ರದ ಉಲ್ಲಾಸ್‌ನಗರದಲ್ಲಿಯೂ ಇದೇ ರೀತಿಯ ವಿಗ್ರಹವನ್ನು ಕಲಾವಿದರು ಮಾಡಿರುವುದನ್ನು ಕಾಣಬಹುದು. ಗಣೇಶನ ವಿಗ್ರಹವು ಹಳದಿ-ಕೇಸರಿ ಧೋತಿಯಲ್ಲಿ ಕಂಗೊಳಿಸುತ್ತಿದೆ. ಚಂದನ ಟಿಕಾ, ಜಡೆ ಮತ್ತು ಪ್ರಶಾಂತ ಧ್ಯಾನ ಭಂಗಿಯಿಂದ ಅಲಂಕರಿಸಲ್ಪಟ್ಟಿದೆ. ಇದು ಪ್ರೇಮಾನಂದ ಜಿ ಮಹಾರಾಜ್ ಅವರ ಪ್ರತಿಮಾರೂಪದ ನೋಟವನ್ನು ಪ್ರತಿಧ್ವನಿಸುತ್ತದೆ.

ಈ ಚಿತ್ರವನ್ನು @JeetN25 ಎಂಬ ಎಕ್ಸ್ ಬಳಕೆದಾರರೊಬ್ಬ ತನ್ನ ಖಾತೆಯಲ್ಲಿ ಮಧ್ಯಪ್ರದೇಶದ ಕಲಾವಿದ ಗಣಪತಿಯನ್ನು ಪ್ರೇಮಾನಂದ ಜಿ ಮಹಾರಾಜನಂತೆ ಬಿಂಬಿಸಿದ್ದಾರೆ ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

ಈ ಪೋಸ್ಟ್​ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಪ್ರೇಮಾನಂದ ಮಹಾರಾಜರ ಜನಪ್ರಿಯತೆಯನ್ನು ಜನರು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೋರ್ವ ಬಳಕೆದಾರ ಗಣಪತಿ ಮೂರ್ತಿಯನ್ನು ಪ್ರೇಮ್ ಆನಂದ್ ಮಹಾರಾಜರಂತೆ ಮಾಡಿ ಮಾರುಕಟ್ಟೆಗೆ ತಂದಿದ್ದಾರೆ. ಜನರು ಅವರ ಜನಪ್ರಿಯತೆಯ ಲಾಭ ಪಡೆಯಲು ಪ್ರಾರಂಭಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net