ಕಾವೇರಮ್ಮನ ಪ್ರತಿಮೆಗೆ ವಿಶೇಷ ಪೂಜೆ

oppo_0
ಕಾರ ಹುಣ್ಣಿಮೆ ಪ್ರಯುಕ್ತ ಕೊಪ್ಪ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪುರುಷೋತ್ತಮ್ ಭಟ್, ಬೆಬೀಂದ್ರ ಪ್ರಸಾದ್, ನಟೇಶ್, ರವೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ರೇಖಾ ನಟೇಶ್ ಇತರರು ಇದ್ದರು.
Published on

ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಬಿ.ಎಂ.ರಸ್ತೆ ಪಕ್ಕದ ಕಾವೇರಿ ದಡದಲ್ಲಿ ಬಾ ರವಿ ಕಾವೇರಿ ಕನ್ನಡ ಸಂಘದ ವತಿಯಿಂದ ನಿರ್ಮಿಸಿರುವ ಕಾವೇರಮ್ಮನ ಪ್ರತಿಮೆಗೆ 147ನೇ ಕಾರ ಹುಣ್ಣಿಮೆಯ ಪ್ರಯುಕ್ತ ಬುಧವಾರ ವಿಶೇಷ ಪೂಜೆ ನೆರವೇರಿಸಲಾಯಿತು.

ಸೇವಾರ್ಥದಾರರಾದ ಕುಶಾಲನಗರದ ರೇಖಾ ನಟೇಶ್ ಕುಟುಂಬ ವರ್ಗದಿಂದ ಸಂಘದ ಅಧ್ಯಕ್ಷ ಬೆಬೀಂದ್ರ ಪ್ರಸಾದ್ ಅವರ ಸಮ್ಮುಖದಲ್ಲಿ ಅರ್ಚಕ ಪುರುಷೋತ್ತಮ ಭಟ್ ಅವರು ಕಾವೇರಮ್ಮನ ಪ್ರತಿಮೆಯನ್ನು ಸ್ವಚ್ಛಗೊಳಿಸಿ, ಎಳನೀರು ಹಾಲು, ಜೇನುತುಪ್ಪದಿಂದ ನೈವೇದ್ಯ ಮಾಡಿದರು. ಸುನಂದಾ ಕೌಶಿಕ್ ಅವರು ಕಾವೇರಮ್ಮನಿಗೆ ಕೊಡುಗೆಯಾಗಿ ನೀಡಿದ್ದ ಹೊಸ ಸೀರೆ ಕುಪ್ಪಸ ತೊಟ್ಟು ಒಡವೆಗಳನ್ನು ಧರಿಸಿ ವಿವಿಧ ಹೂಗಳಿಂದ ಅಲಂಕರಿಸಿ ಎಡೆ, ನೈವೇದ್ಯ, ಅಭಿಷೇಕ ಮಾಡಿ ಮಹಾಮಂಗಳಾರತಿ ನೆರವೇರಿಸಿದರು. ಬಂದಂತಹ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಸಂಘದ ಪದಾಧಿಕಾರಿಗಳಾದ ರವೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ಚಂದ್ರು, ಭಕ್ತಾದಿಗಳಾದ ಮಂಜು, ರುದ್ರೇಶ್, ತಿಲಕ್, ಸುನಂದಾ, ಕೌಶಿಕ್, ಚಂದ್ರಣ್ಣ, ರಾಜೇಶ್ವರಿ, ಮಣಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net