

ಅರಸೀಕೆರೆ ಗ್ರಾಮಾಂತರ: ಶ್ರೀ ವಿಶ್ವಾವಸು ನಾಮ ನೂತನ ಸಂವತ್ಸರ ಪ್ರಯುಕ್ತ ನಗರದ ಕಂತೇನಹಳ್ಳಿಯಲ್ಲಿರುವ ಶ್ರೀ ಶನೈಶ್ಚರ ಸ್ವಾಮಿಗೆ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ದೇವಾಲಯ ಪ್ರಮುಖ ಅರ್ಚಕರಾದ ಮುರಳಿ ಮಂದಾರ್ತಿ, ತಿಪಟೂರು ವೇ.ಬ್ರ.ನರಸಿಂಹ ಶಾಸ್ತ್ರಿ, ವೆ.ಬ್ರ.ಶ್ರೀ ಆದರ್ಶ್ ಅವರ ನೇತೃತ್ವದಲ್ಲಿ ಪ್ರಾತಃ ಕಾಲದಿಂದಲೇ ನವಗ್ರಹ, ಗಣಪತಿ, ಚಂಡಿಕಾ ಸೇರಿದಂತೆ ವಿವಿಧ ಹೋಮ ಹವನಾದಿಗಳು ಜಗುಗಿದವು. ಸ್ವಾಮಿಗೆ ವಿಶೇಷ ಬೆಣ್ಣೆ ಅಲಂಕಾರ ಮತ್ತು ನವಗ್ರಹ, ಶ್ರೀ ಗಣಪತಿ, ಶ್ರೀ ಬ್ರಹ್ಮಲಿಂಗೇಶ್ವರ, ಶ್ರೀ ದುರ್ಗಾಪರಮೇಶ್ವರಿ ದೇವಿಗೆ ವಿವಿಧ ಹೂವುಗಳ ಅಲಂಕಾರ ಭಕ್ತರ ಮನಸೂರೆಗೊಂಡಿತು.
ಕಂತೇನಹಳ್ಳಿ ಮತ್ತು ಸುತ್ತಮುತ್ತಲಿನ ನೂರಾರು ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ನವ ಧಾನ್ಯಗಳನ್ನು ದಾನದ ರೂಪದಲ್ಲಿ ಅರ್ಪಿಸಿದರು. ಮದ್ಯಾಹ್ನ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.