ಕೊಪ್ಪದ ದೇಗುಲಗಳಲ್ಲಿ ವಿಶೇಷ ಪೂಜೆ

koppa rama
ಕೊಪ್ಪ ಹೊರವಲಯದ ಹುಲ್ಲುಮಕ್ಕಿಯ ವೀರಾಂಜನೇಯ ದೇವಸ್ಥಾನದಲ್ಲಿ ಶ್ರೀಬಾಲರಾಮ ಮೂರ್ತಿ ಪ್ರಾಣಪ್ರತಿಷ್ಠೆ ಅಂಗವಾಗಿ ಪೂರ್ಣಾಹುತಿ ನಡೆಯಿತು.
Published on

ಕೊಪ್ಪ: ಅಯೋಧ್ಯೆಯಲ್ಲಿ ಶ್ರೀ ಬಾಲರಾಮ ಮೂರ್ತಿ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ತಾಲೂಕಿನ ಬಹುತೇಕ ದೇಗುಲಗಳಲ್ಲಿ ಗ್ರಾಮಸ್ಥರು ಶ್ರೀರಾಮತಾರಕ ಹೋಮ, ಪೂರ್ಣಹುತಿ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿದರು.
ಕೊಪ್ಪ ವೀರಭದ್ರ ದೇವಸ್ಥಾನ, ಹುಲ್ಲುಮಕ್ಕಿಯ ವೀರಾಂಜನೇಯ ದೇವಸ್ಥಾನ, ಗುತ್ಯಮ್ಮ ದೇವಸ್ಥಾನ, ಹರಿಹರಪುರ ಶ್ರೀಮಠ, ನಾರ್ವೆ ಚಂಡಿಕೇಶ್ವರಿ ದೇವಸ್ಥಾನ ಸೇರಿದಂತೆ ಹಲವೆಡೆ ಪೂಜೆ ನಡೆಯಿತು. ಕೊಪ್ಪ, ಹರಿಹರಪುರ, ಭಂಡಿಗಡಿ ಗ್ರಾಮದಲ್ಲಿ ಎಲ್.ಇ.ಡಿ ಮೂಲಕ ಅಯೋಧ್ಯೆಯಲ್ಲಿ ನಡೆಯುತ್ತಿದ್ದ ಪ್ರಾಣಪ್ರತಿಷ್ಠೆ ಕಾರ್ಯಕ್ರಮವನ್ನು ನೇರ ಪ್ರಸಾರದ ಮೂಲಕ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು.
ಕೊಪ್ಪದ ಬಹುತೇಕ ವರ್ತಕರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net