ಬೆಟ್ಟದಪುರದಲ್ಲಿ ವಿಶೇಷ ಪೂಜೆ

Published on

ಬೆಟ್ಟದಪುರ: ಇಲ್ಲಿನ ಹಲಗೇಗೌಡ ಕಾಂಪ್ಲೆಕ್ಸ್‌ನ ವರ್ತಕರು ಆಷಾಢ ಮಾಸದ ಕೊನೆಯ ಶುಕ್ರವಾರದ ಪ್ರಯುಕ್ತ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಉದ್ಯಮಿ ಹರದೂರು ಮಂಜುನಾಥ ಮಾತನಾಡಿ, ಪ್ರತಿ ಬಾರಿಯಂತೆ ಈ ಬಾರಿಯೂ ಆಷಾಢ ಮಾಸದ ಶುಭ ಶುಕ್ರವಾರದಂದು ವರ್ತಕರು, ಎಲ್ಲರೊಂದಿಗೆ ಸೇರಿ ಬೆಟ್ಟದ ತಾಯಿ, ನಾಡದೇವತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಆಗಮಿಸಿದ ಎಲ್ಲ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು ಎಂದರು. ಉದ್ಯಮಿಗಳಾದ ಪುಟ್ಟರಾಜೇಗೌಡ, ರವಿ, ನಿಶಾಂತ್, ಪರ್ಬಾತ್ ಸಿಂಗ್, ಇಂದರ್ ಸಿಂಗ್, ರೂಪೇಶ್, ಕಿರಣ್, ದರ್ಶನ್, ಪ್ರಸನ್ನ, ಕಿಶನ್, ವಿಕ್ಕಿ, ಸುನಿಲ್ ಸೇರಿದಂತೆ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net