ರಾಜಮಾತೆ ಪ್ರಮೋದಾದೇವಿ ಹಾಗೂ ಸಚಿವರಿಂದ ಇಂದು ತಿರುಪತಿಯಲ್ಲಿ ವಿಶೇಷ ಪೂಜೆ: ಹಿನ್ನೆಲೆ ಏನು?

Srivari
Published on

ತಿರುಮಲ: ರಾಜಮಾತೆ ಪ್ರಮೋದಾದೇವಿ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಂದ ಇಂದು ತಿರುಮಲ ತಿರುಪತಿ ದೇವಸ್ಥಾನದಲ್ಲಿ ಶ್ರೀವಾರಿ ಪಲ್ಲೋತ್ಸವ ಹಾಗೂ ವಿಶೇಷ ಪೂಜೆಗಳು ನೆರವೇರಿದವು.

ಶ್ರೀವಾರಿ ಉತ್ಸವಮೂರ್ತಿಯನ್ನು ವಜ್ರ-ವೈಢೂರ್ಯಗಳಿಂದ ಅಲಂಕರಿಸಿ ಉತ್ಸವ ನಡೆಸಲಾಯಿತು ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಕರ್ನಾಟಕ ರಾಜ್ಯಕ್ಕೆ ಹಾಗೂ ಜನತೆಗೆ ಒಳ್ಳೆಯದಾಗಲಿ ಎಂದು ಇದೇ ವೇಳೆ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಲಾಯಿತು.

ಈ ದಿನ ವಿಶೇಷ, ಹಿನ್ನೆಲೆ ಏನು?: ಜುಲೈ 26 ಎನ್ನುವುದು ಕರ್ನಾಟಕದ ಪಾಲಿಗೆ ವಿಶೇಷವಾದ ದಿನ. ಏಕೆಂದರೆ 300 ವರ್ಷಗಳ ಹಿಂದೆ ಇದೇ ಜು. 26ರಂದು ಅಂದಿನ ರಾಜ ಕೃಷ್ಣರಾಜೇಂದ್ರ ಒಡೆಯರ್ ಅವರು ಕರ್ನಾಟಕದ ಭಕ್ತರಿಗಾಗಿ ತಿರುಮಲದಲ್ಲಿ 7 ಎಕರೆ ಜಾಗ ಖರೀದಿಸಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದರು. ಈ ವಿಶೇಷ ದಿನದ ಪ್ರಯುಕ್ತ ಪ್ರತಿವರ್ಷ ಜುಲೈ 26ರಂದು ಶ್ರೀವಾರಿ ಪಲ್ಲೋತ್ಸವ ಹಾಗೂ ವಿಶೇಷ ಪೂಜೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net