ಶಾಲಾ, ಕಾಲೇಜು ಸುತ್ತ ಸಂಚಾರ ಪೊಲೀಸರ ವಿಶೇಷ ಕಾರ್ಯಾಚರಣೆ

traffic_police_driving_licence-amp
Published on

ಬೆಂಗಳೂರು: ಶಾಲಾ- ಕಾಲೇಜು ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಸುವರ ವಿರುದ್ಧ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಎರಡು ಸಾವಿರ ಪ್ರಕರಣ ದಾಖಲಿಸಿದ್ದಾರೆ.

ಶಾಲಾ-ಕಾಲೇಜು ಸುತ್ತಮುತ್ತಲ ದ್ವಿಚಕ್ರ ವಾಹನಗಳಲ್ಲಿ ಅಡ್ಡಾದಿಡ್ಡಿ ಚಲಾಯಿಸುವುದು, ಸಂಚಾರ ನಿಯಮ ಉಲ್ಲಂಸುವುದು ಮತ್ತು ವಿದ್ಯಾರ್ಥಿಗಳಿಗೆ ತೊಂದರೆ ಕೊಡುವರ ಗ್ಯಾಂಗ್ ಸಹ ಹೆಚ್ಚಾಗಿತ್ತು.

ಇದನ್ನು ಮನಗೊಂಡ ಸಂಚಾರ ಪೊಲೀಸರು, ಸೋಮವಾರ ನಗರದ ಎಲ್ಲೆಡೆ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಹೆಲ್ಮೆಟ್ ರಹಿತ ಸವಾರಿ 132 ಪ್ರಕರಣ, ಟ್ರಿಪಲ್ ರೈಡಿಂಗ್ 375, ನೋ ಎಂಟ್ರಿ 27 ಮತ್ತು ಪಾದಚಾರಿ ಮಾರ್ಗದ ಮೇಲೆ ಸವಾರಿ 1,466 ಪ್ರಕರಣ ದಾಖಲಿಸಿ 9.85 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net