ಆ.4ರಿಂದ ಆಧ್ಯಾತ್ಮ ಚಿಂತನೆ ವಿಶೇಷ ಉಪನ್ಯಾಸ ಮಾಲಿಕೆ

K.C.nataraj bhagavath
ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ .
Published on

ಶಿವಮೊಗ್ಗ: ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಶ್ರಾವಣ ಅಧಿಕ ಮಾಸದ ಅಧಿಕ ಮಾಸದಲ್ಲಿ ಆಧ್ಯಾತ್ಮ ಚಿಂತನೆ ವಿಶೇಷ ಉಪನ್ಯಾಸ ಮಾಲಿಕೆಯನ್ನು ಆ.4ರಿಂದ 6ರವರೆಗೆ ಪ್ರತಿದಿನ ಸಂಜೆ 6ಕ್ಕೆ ಬಿ.ಎಚ್.ರಸ್ತೆಯ ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ತಿಳಿಸಿದರು.

ಶ್ರಾವಣದಲ್ಲಿ ಬರುವ ಅಧಿಕ ಮಾಸ ವಿಶಿಷ್ಟವಾದುದು. ಅದನ್ನು ಗಮನಿಸಿ ಮಹಾಸಭಾ ಮೂರು ದಿನ ವಿಶೇಷ ಉಪನ್ಯಾಸ ಮಾಲಿಕೆ ಆಯೋಜಿಸಿದೆ. ಆ.4ರಂದು ಆಯನೂರು ಮಧುಸೂದನಾಚಾರ್ಯ ಅವರು ಯುವಜನಾಂಗ ಮತ್ತು ಸಂಸ್ಕಾರ ಕುರಿತು ಉಪನ್ಯಾಸ ನೀಡುವರು ಆ. 5ರಂದು ಪಾಂಡೇಶ್ವರದ ಡಾ. ವಿಜಯಮಂಜ ಜೀವನಧರ್ಮ ಹಾಗೂ ಆ.6ರಂದು ಡಾ. ಎಚ್.ಆರ್.ವಾಸುದೇವ ಅವರು ಚಾತುರ್ವಣ್ಯ ಧರ್ಮ ಕುರಿತು ಮಾತನಾಡುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದೇ ಸಂದರ್ಭದಲ್ಲಿ ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಆ.8ರಂದು 4.30ಕ್ಕೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಗರದ ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಲಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ರಾಂತಿಕಾರಿಗಳ ಚಿತ್ರ ಬಿಡಿಸುವ ಸ್ಪರ್ಧೆ, ಪಿಯು ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಮತ್ತು ತಂಡಗಳು ಆ.6ರೊಳಗೆ ನೋಂದಾಯಿಸಿಕೊಳ್ಳಬೇಕು. ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು ಎಂದರು.
ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ(7829903808, 9945462499)ಯನ್ನು ಸಂಪರ್ಕಿಸಬಹುದು. ಮಹಾಸಭಾದ ಕಾರ್ಯದರ್ಶಿ ಬಿ.ಕೆ.ವೆಂಕಟೇಶಮೂರ್ತಿ, ಪ್ರಮುಖರಾದ ಸೂರ್ಯ ನಾರಾಯಣ, ಕುಮಾರಸ್ವಾಮಿ, ಡಾ. ನಾಗಮಣಿ, ಕೇಶವಮೂರ್ತಿ, ರವಿಕುಮಾರ್, ಶಂಕರನಾರಾಯಣ ಇದ್ದರು.

ಮಹಾಪುರುಷರ ಬಗ್ಗೆ ಚಿತ್ರ ಬಿಡಿಸುವ ಸ್ಪರ್ಧೆ
ಕ್ರಾಂತಿಕಾರಿಗಳ ಚಿತ್ರ ಬಿಡಿಸುವವರು ಮಹಾಸಭಾ ನಿಗದಿಪಡಿಸಿದ ಮಹಾಪುರುಷರ ಬಗ್ಗೆ ಚಿತ್ರಬಿಡಿಸುವ ಸ್ಪರ್ಧೆ ಆಯೋಜಿಸಿದೆ. ಝಾನ್ಸಿರಾಣಿ ಲಕ್ಷ್ಮೀಬಾಯಿ, ತಾತ್ಯಾಟೋಪಿ, ಮಂಗಲ ಪಾಂಡೆ, ರಾಜ್‌ಗುರು, ಚಂದ್ರಶೇಖರ ಆಜಾದ್, ಛಾಪೇಕರ್ ಸಹೋದರರು, ಸಾವರ್ಕರ್, ಮುದವೀಡು ಕೃಷ್ಣರಾಯರು, ವಾಸದೇವ ಬಲವಂತ ಡ್ಕೆ, ಸೇನಾಪತಿ ಬಾಪಟ್, ಬಾಲಗಂಗಾಧರ ತಿಲಕ್, ದುರ್ಗಾವತಿ ದೇವಿ, ಸುಬ್ರಹ್ಮಣ್ಯ ಶಿವ, ಅರವಿಂದ ಘೋಶ್, ಸುಭಾಷ್‌ಚಂದ್ರ ಭೋಸ್, ಮದನ ಮೋಹನ ಮಾಳವಿಯ, ಖುದಿರಾಂ ಭೋಸ್, ಭಂಕಿಮಚಂದ್ರ ಚಟರ್ಜಿ, ಕಾರ್ನಾಡ್ ಸದಾಶಿವರಾಯ, ಅಲ್ಲೂರಿ ಸೀತಾರಾಮ ರಾಜು, ಕಮಲಾದೇವಿ ಚಟ್ಟೋಪಾಧ್ಯಾಯ, ಪಿಂಗಳಿ ವೆಂಕಯ್ಯ ಅವರ ಚಿತ್ರ ಬಿಡಿಸಬಹುದು ಎಂದು ನಟರಾಜ್ ಭಾಗವತ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net