

ಗೋಕರ್ಣ: ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ಮಹಾಬಲೇಶ್ವರ ಆತ್ಮಲಿಂಗಕ್ಕೆ ಸ್ಥಳೀಯ ಪೊಲೀಸರ ವತಿಯಿಂದ ವಾರ್ಷಿಕವಾಗಿ ಶ್ರಾವಣ ಮಾಸದಲ್ಲಿ ನಡೆಯುವ ವಿಶೇಷ ಪುಷ್ಪ ಪೂಜೆ ಶುಕ್ರವಾರ ರಾತ್ರಿ ನಡೆಯಿತು.
ಮಂದಿರದ ಪ್ರಧಾನ ಅರ್ಚಕ ವೇ.ಶ್ರೀನಾಗ ಶೇಷ ಅಡಿ ನೇತೃತ್ವದಲ್ಲಿ ಮಹಾಪೂಜೆ ಮತ್ತು ಮಹಾಮಂಗಳಾರತಿ ಸಮರ್ಪಿತವಾಗಿ ಸಮಸ್ತ ಪೊಲೀಸರ ಕ್ಷೇಮಾಭ್ಯುದಯಕ್ಕಾಗಿ ಪ್ರಾರ್ಥಿಸಲಾಯಿತು. ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಧರ ಎಸ್.ಆರ್. ಮತ್ತು ಸಿಬ್ಬಂದಿಗೆ ಮಂದಿರದ ವತಿಯಿಂದ ಪೂಜಾ ಪ್ರಸಾದ ನೀಡಲಾಯಿತು.