

ಧಾರವಾಡ: ಇಂದು ಧಾರವಾಡ ಹಾಗೂ ಬೆಂಗಳೂರಿನ ನಡುವೆ ಸಂಚರಿಸಲಿರುವ ಒಟ್ಟು 5 ವಂದೇ ಭಾರತ್ ಎಕ್ಸಪ್ರೆಸ್ ರೈಲುಗಳಿಗೆ ಇಂದು ಪ್ರಧಾನಿ ಮೋದಿ ಭೋಪಾಲ್ ನಿಂದ ವರ್ಚುವಲ್ ಆಗಿ ಚಾಲನೆ ನೀಡಿದ್ದಾರೆ. ವಂದೇ ಭಾರತ್ ರೈಲು ನಾನಾ ಕಾರಣಗಳಿಗಾಗಿ ಸದ್ದು ಮಾಡುತ್ತಿದ್ದು ತಂತ್ರಜ್ಞಾನದ ದೃಷ್ಟಿಯಲ್ಲೂ ಉನ್ನತ ಗುಣಮಟ್ಟದ ವಿದ್ಯುತ್ ರೈಲು ಇದಾಗಿರಲಿದೆ.
ಪ್ರಧಾನಿಮೋದಿ ವಂದೇ ಭಾರತ್ ರೈಲಿಗೆ ವರ್ಚ್ಯುವಲ್ ಆಗಿ ಚಾಲನೆ ನೀಡಿದರು. ಧಾರವಾಡದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದ್ದಾರೆ. ಚಾಲನೆ ಸಿಕ್ಕ ನಂತರ ಬೆಂಗಳೂರಿಗೆ ತನ್ನ ಮೊದಲ ಪ್ರಯಾಣದ ಭಾಗವಾಗಿ ರೈಲು ಹೊರಟಿದೆ
ಇದು ಕರ್ನಾಟಕ ರಾಜ್ಯದಲ್ಲಿ ಆರಂಭವಾಗುತ್ತಿರುವ ಎರಡನೇ ರೈಲು ಆಗಿದ್ದು ಸ್ವದೇಶಿ ನಿರ್ಮಿತ ಸೆಮಿ ಹೈ ಸ್ಪೀಡ್ ರೈಲು ಇದಾಗಿದೆ. ಧಾರವಾಡ-ಬೆಂಗಳೂರು ವಂದೇ ಭಾರತ ರೈಲು 8 ಬೋಗಿಗಳ ಒಟ್ಟು 530 ಆಸನ ಹೊಂದಿದೆ. ಈ ರೈಲು 6.5 ಗಂಟೆಯಲ್ಲಿ 489 ಕಿಮೀ ಕ್ರಮಿಸಲಿದ್ದು ಇತರೆ ರೈಲಿಗೆ ಹೋಲಿಸಿದರೆ 1 ಗಂಟೆ ಕಡಿಮೆ ಅವಧಿಯನ್ನು ತೆಗೆದುಕೊಳ್ಳಲಿದೆ.