

ಎನ್.ಆರ್.ಪುರ: ಸರ್ಕಾರದಿಂದ ವಿಶೇಷ ಅಂಗವಿಕಲರಿಗೆ ವಿಶೇಷ ಸವಲತ್ತುಗಳನ್ನು ವಿತರಿಸುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ತಾಪಂ ಆವರಣದಲ್ಲಿ ಶುಕ್ರವಾರ ವಿಕಲಚೇತನರಿಗೆ ವಿವಿಧ ಸಲಕರಣೆಗಳನ್ನು ವಿತರಿಸಿ ಮಾತನಾಡಿ, ವಿಲಚೇತನರ ಸವಲತ್ತುಗಳನ್ನು ವಿತರಿಸುವ ವ್ಯವಸ್ಥೆ ಅಭಿವ್ಧೃಪಡಿಸಲಾಗುವುದು. ವಿಲಚೇತನರಿಗೆ ದುಡಿಯಲು ಸರ್ಕಾರ ಅವಕಾಶ ಹಾಗೂ ಸಹಾಯ ನೀಡಿ, ಅಂಗವಿಕಲರೇ ಸ್ವಂತ ದುಡಿಮೆ ಮಾಡಿದ ನಿದರ್ಶನಗಳಿವೆ. ಇಲಾಖೆಯಿಂದ ಇಂದು 10 ಜನರಿಗೆ ವಾಟರ್‌ಬೆಡ್, 20 ವೀಲ್‌ಚೇರ್, 10 ಶ್ರವಣ ಸಾಧನ,4 ವಾಕರ್, 4 ಊರುಗೋಲು, 4 ವಿಪಿ ಛೇರ್ ಸೇರಿದಂತೆ ವಿವಿಧ ಸಲಕರಣೆಗಳನ್ನು ವಿತರಿಸಲಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಕೆಪಿಸಿಸಿ ಸದಸ್ಯ ಇಫ್ತಿಕಾರ್‌ಆದಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್‌ನಟರಾಜ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ, ಸದಸ್ಯರುಗಳಾದ ಜುಬೇದಾ, ಸೈಯದ್‌ವಸೀಂ,ಮುನಾವರ್‌ಪಾಷಾ, ಇಒ ಎಸ್.ನಯನ ಇದ್ದರು.