ದೇಶ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೀರಿ; ಪ್ರಮೋದ್ ಮುತಾಲಿಕ್

Pramod Muthalik
Published on

ಗದಗ : ನೀವು ಕಾಂಗ್ರೆಸ್ ತಂದಿಲ್ಲಾ. ದೇಶ ವಿರೋಧಿ ಶಕ್ತಿಯಾಗಿರುವ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೀರಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್‌ ಕಿಡಿಕಾರಿದ್ದಾರೆ.

ಗದಗನಲ್ಲಿ ಸಾವರ್ಕರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೋಡೆತ್ತುಗಳ ಲಾಭ ತಗೆದುಕೊಂಡು ಇಟ್ರಲ್ಲಾ. ಗೋ-ಮಾತೆ ಆವಾಗ ನೆನಪು ಆಗಲಿಲ್ವಾ? ಆದರೆ ಈಗ ಗೋ-ಹತ್ಯೆ ವಾಪಾಸ್ ಪಡೆಯುತ್ತೇವೆಂದು ಹೇಳುತ್ತಿದ್ದಾರೆ. ಮುಸ್ಲಿಂರ ವೋಟ್ ಗೋಸ್ಕರ ಗೋ-ಹತ್ಯೆ ನಿಷೇಧ ಹಿಂಪಡೆಯುತ್ತೇವೆ ಅಂತಾ ಹೇಳತ್ತಾರೆ ಎಂದು ಕಾಂಗ್ರೆಸ್​​ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಮಧ್ಯಪ್ರದೇಶದಲ್ಲಿ ಮೊದಲ ಬಾರಿಗೆ ಕಾನೂನು ರಚನೆ ಮಾಡಿದ್ರು, ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮಾಡಿದ್ದು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್. ಆಜಾನ್ ಮೈಕ್ ನಿಂದ ಜನರಿಗೆ ತೊಂದರೆ ಆಗುತ್ತದೆ ಎಂದು ಅಂತಾ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಪ್ರಾರ್ಥನೆಗೆ ವಿರೋಧವಿಲ್ಲಾ. ಮೈಕ್ ಶಬ್ದದ ಪರಿಣಾಮ ದಿಂದ ಎಷ್ಟು ಅನಾಹುತ ಆಗುತ್ತಿದೆ ಅದಕ್ಕೆ ವಿರೋಧ ಇದೆ ಎಂದು ಕಿಡಿಕಾರಿದ್ದಾರೆ.

ವಿಚಿತ್ರವಾದ ಕಾಂಗ್ರೆಸ್ ನ ಮನಸ್ಥಿತಿ ಈವಾಗಿಂದ ಅಲ್ಲಾ ಗಾಂಧಿಜಿ ನೇತೃತ್ವದಲ್ಲಿ ವಹಿಸಿದ್ದಾಗಿನಿಂದಲೂ ಇಲ್ಲಿವರಿಗೆ ಮುಂದು ವರಿಯುತ್ತಿದೆ. ಇದು ದೇಶಕ್ಕೆ ಅಪಾಯಕಾರಿ ನೆನಪು ಇಟ್ಟಿಕೊಳ್ಳಿ. ಇದನ್ನು ಬದಲಾವಣೆ,ಪರಿವರ್ತನೆ ಮಾಡಬೇಕು. ಮನೆ ಮನೆಗೆ ತರೆಳಿ ಹೇಳಬೇಕಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net