

ಚೆನ್ನೈ: ಕಳೆದೊಂದು ತಿಂಗಳಿಂದ ಚೆನ್ನೈ ಎಂಜಿಎಂ ಆಸ್ಪತ್ರೆಯಲ್ಲಿ ಕರೊನಾ ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಲೆಜೆಂಡರಿ ಗಾಯಕ ಎಸ್ಪಿ ಬಾಲಸುಬ್ರಮಣ್ಯಂ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ ಅವರ ಪುತ್ರ ಎಸ್ಪಿ ಚರಣ್.
ಇದನ್ನೂ ಓದಿ; ನಿಖಿಲ್ ಚಿತ್ರದ ಹೆಸರೇನು? ಶುಕ್ರವಾರ ಸಿಗಲಿದೆ ಉತ್ತರ‘
‘ಅಪ್ಪನ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ. ಖುಷಿಯ ವಿಚಾರ ಏನೆಂದರೆ, ಅಪ್ಪನ ಕರೊನಾ ವರದಿ ನೆಗೆಟಿವ್ ಬಂದಿದ್ದು, ಒಂಚೂರು ಸಮಾಧಾನ ತಂದಿದೆ. ಅಷ್ಟೇ ಅಲ್ಲ ಅಪ್ಪ ತನಗೇನು ಬೇಕು ಎಂಬುದನ್ನು ಬರಹದ ಮೂಲಕ ಬರೆದು ಕೊಡುತ್ತಿದ್ದಾರೆ. ಅವರೀಗ ಐಪಿಎಲ್ ಮತ್ತು ಟೆನಿಸ್ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಐಪ್ಯಾಡ್ನಲ್ಲಿ ಅದರ ಅಪ್ಡೇಟ್ಸ್ಗಳನ್ನು ನೋಡುತ್ತಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.
‘ನೆಗೆಟಿವ್ ಬಂದಿದೆ ಎಂಬುದು ಖುಷಿಯ ವಿಚಾರವಾದರೂ, ಅವರ ಶ್ವಾಸ ಮೊದಲಿನಂತಾಗಬೇಕು. ಅವರೇ ಉಸಿರಾಡುವಂತಾಗಬೇಕು. ಸದ್ಯಕ್ಕೆ ನಮಗೆಲ್ಲ ಅದೇ ಮಹತ್ವದ್ದು. ಇನ್ನೊಂದು ವಾರದಲ್ಲಿ ಅಪ್ಪನ ವಿವಾಹ ವಾರ್ಷಿಕೋತ್ಸವ ಇರುವ ಹಿನ್ನೆಲೆಯಲ್ಲಿ ಆ ಖುಷಿಯ ಕ್ಷಣಗಳನ್ನೂ ಸಂಭ್ರಮಿಸಲಿದ್ದೇವೆ. ಎಂದಿನಂತೆ ಫಿಸಿಯೋಥೆರಪಿ ನಡೆಯುತ್ತಿದೆ. ನಿಮ್ಮಗಳ ಪ್ರಾರ್ಥನೆ ಹೀಗೆ ಮುಂದುವರಿಯಲಿ’ ಎಂದು ಕಿರು ವಿಡಿಯೋ ಮೂಲಕ ಅಪ್ಪನ ಆರೋಗ್ಯದ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ ಎಸ್ಪಿ ಚರಣ್. (ಏಜೆನ್ಸೀಸ್)