ತುಂಗಾ ಡ್ಯಾಂ ಹಿನ್ನೀರಿಗೆ 53 ಲಕ್ಷ ಸ್ಪಾನ್ ಮೀನುಮರಿ ಬಿತ್ತನೆ

Spawn Fish sowing in Tunga Dam Backwater
ರೋಹು ಜಾತಿ ಸ್ಪಾನ್ ಮರಿಗಳನ್ನು ತುಂಗಾ ಜಲಾಶಯದ ಹಿನ್ನೀರಿಯಲ್ಲಿ ಬಿತ್ತನೆ ಮಾಡಲಾಯಿತು. ಡಿ.ತಿಪ್ಪೇಸ್ವಾಮಿ, ಓ.ಗಿರೀಶ್, ಜಿ.ಎಂ. ಶಿವಕುಮಾರ್, ಎಸ್.ಕೆ.ಸತೀಶ್, ಅರಸಯ್ಯ, ಪ್ರದೀಪ್, ಕೆ.ಎಸ್. ರಾಘವೇಂದ್ರ ಇದ್ದರು.
Published on

ಶಿವಮೊಗ್ಗ: ಗಾಜನೂರು ಮೀನುಮರಿ ಉತ್ಪಾದನಾ ಕೇಂದ್ರದಿಂದ 53 ಲಕ್ಷ ರೋಹು ಜಾತಿ ಸ್ಪಾನ್ ಮರಿಗಳನ್ನು ತುಂಗಾ ಜಲಾಶಯದ ಹಿನ್ನೀರಿಯಲ್ಲಿ ಬಿತ್ತನೆ ಮಾಡಲಾಯಿತು.

ಗಾಜನೂರು ಮೀನುಮರಿ ಉತ್ಪಾದನಾ ಕೇಂದ್ರದಿಂದ ಹಂತ ಹಂತವಾಗಿ ಉತ್ಪಾದಿಸಬಹುದಾದ 2.16 ಕೋಟಿ ಸ್ಟಾನ್ ಮೀನುಮರಿಗಳನ್ನು ತುಂಗಾ ಜಲಾಶಯದಲ್ಲಿ ದಸ್ತಾನಿಕರಿಸಲು ಬೆಂಗಳೂರು ಮೀನುಗಾರಿಕೆ ಇಲಾಖೆ ನಿರ್ದೇಶಕರ ಆದೇಶದ ಮೇರೆಗೆ ಗುರುವಾರ ಅಪರ ನಿರ್ದೇಶಕ (ಒಳನಾಡು) ಡಿ.ತಿಪ್ಪೇಸ್ವಾಮಿ ಅವರ ನೇತೃತ್ವದಲ್ಲಿ 80,560 ರೂ. ಮೌಲ್ಯದ ರೋಹು ಜಾತಿ ಸ್ಪಾನ್ ಮರಿಗಳನ್ನು ಹಿನ್ನೀರಿಯಲ್ಲಿ ದಾಸ್ತಾನು ಮಾಡಲಾಯಿತು.
ಶಿವಮೊಗ್ಗ ವಲಯ ಜಂಟಿ ನಿರ್ದೇಶಕ ಓ.ಗಿರೀಶ್, ಶಿವಮೊಗ್ಗ ಜಿಲ್ಲೆ ಮೀನುಗಾರಿಕೆ ಉಪ ನಿರ್ದೇಶಕ ಜಿ.ಎಂ. ಶಿವಕುಮಾರ್, ಶಿವಮೊಗ್ಗ ಜಲಾಶಯ ವಿಭಾಗದ ಮೀನುಗಾರಿಕೆ ಉಪ ನಿರ್ದೇಶಕ ಎಸ್.ಕೆ.ಸತೀಶ್, ಗಾಜನೂರು ಗಂಗಾಪರಮೇಶ್ವರಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಅರಸಯ್ಯ, ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಪ್ರದೀಪ್, ಕೆ.ಎಸ್. ರಾಘವೇಂದ್ರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net