

ಮುಂಬೈ: ನಯನತಾರಾಗೆ ಅವಕಾಶಗಳ ಸುರಿಮಳೆಗರೆಯುತ್ತಿರುವ ಪರಿಣಾಮ ಇಂಡಸ್ಟ್ರಿಗೆ ಬಂದು ಎರಡು ದಶಕಗಳೇ ಕಳೆದರೂ ಇನ್ನೂ ಮಿಂಚುತ್ತಲೇ ಇದ್ದಾರೆ. ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಮದುವೆಯಾದ ನಂತರ ಮಕ್ಕಳಾದರೂ ಒಂದಿಲ್ಲೊಂದು ಸಿನಿಮಾ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಲೇ ಇದ್ದಾರೆ.
ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಎಂಬ ಹೆಗ್ಗಳಿಕೆ ನಯನತಾರಾಗೆ ಇದೆ. ಇದರ ನಡುವೆ ಇತ್ತೀಚೆಗಷ್ಟೇ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ನಯನತಾರಾ ರಾಷ್ಟ್ರಮಟ್ಟದಲ್ಲಿ ತನ್ನ ಇಮೇಜ್ ಅನ್ನು ಮತ್ತಷ್ಟು ದ್ವಿಗುಣಗೊಳಿಸಿಕೊಂಡಿದ್ದಾರೆ.
ಮೋಸ್ಟ್ ಇನ್‌ಫ್ಲುಯೆನ್ಸ್ ಯಂಗ್ ಇಂಡಿಯನ್ಸ್ ಬೈ ಜಿಕ್ಯೂ ಎಂಬ ಕಾರ್ಯಕ್ರಮದಲ್ಲಿ ನಯನತಾರಾ ಎಂಟ್ರಿ ವಿಶೇಷ ಆಕರ್ಷಣೆಯಾಗಿತ್ತು.
ಗುರುವಾರ ನಡೆದ ಈ ಫೋಟೋಶೂಟ್‌ನಲ್ಲಿ ಬಾಲಿವುಡ್‌ನ ಎಲ್ಲಾ ತಾರೆಯರು ಭಾಗವಹಿಸಿದ್ದರು, ಆದರೆ ನಯನತಾರಾ ಮಾತ್ರ ವಿಶೇಷ ಆಕರ್ಷಣೆಯಾದರು.
ಈಕೆ ತನ್ನ ಟ್ಯಾಲೆಂಟ್ ತೋರಿಸುತ್ತಾ, ಗ್ಲಾಮರ್ ಆಗಿ ನೀಡಿರುವ ಪೋಸ್ ಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನಯನತಾರಾ ಮತ್ತೆ ಬಂದಿದ್ದಾರೆ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನು ನೋಡಿದ ಹಲವು ನೆಟಿಜನ್‌ಗಳು ನಾವು ನಿಜವಾಗಿ ನೋಡುತ್ತಿರುವುದು ನಯನತಾರಾನಾ? ಎಂದು ಹುಬ್ಬೇರಿಸಿದ್ದಾರೆ. ನಯನತಾರಾ ಮಕ್ಕಳಾದ ಮೇಲೂ ತುಂಬಾ ಬದಲಾಗಿದ್ದಾಳೆ ಎಂದು ಹೇಳುತ್ತಿದ್ದಾರೆ.