ಎಸ್​ಎಸ್​ಎಲ್​ಸಿ ಮೌಲ್ಯಮಾಪನಕ್ಕೆ ಎಸ್​ಒಪಿ; 13ರಿಂದ ಚಟುವಟಿಕೆ ಆರಂಭ ಸುರಕ್ಷತಾ ಕ್ರಮ ಅನುಸರಣೆ

front-4
Published on

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಕ್ತಾಯದ ಬೆನ್ನಲ್ಲೇ ಮೌಲ್ಯಮಾಪನ ನಡೆಸಲು ಸಜ್ಜಾಗಿರುವ ಶಿಕ್ಷಣ ಇಲಾಖೆ ಈ ವೇಳೆ ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ ಪಟ್ಟಿ (ಎಸ್​ಒಪಿ) ಸಿದ್ಧಪಡಿಸಿದೆ. ಜುಲೈ 13ರಂದು ಮೌಲ್ಯಮಾಪನ ಆರಂಭವಾಗಲಿದ್ದು, ಪ್ರಮುಖವಾಗಿ ಮೌಲ್ಯಮಾಪನ ಕೇಂದ್ರ ಘೊಷಿತ ಕಂಟೇನ್ಮೆಂಟ್ ವಲಯದಲ್ಲಿ ಇರಬಾರದು. ಕೇಂದ್ರವನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಬಳಸಲು ಅವಕಾಶ ನೀಡಬಾರದು. ಮೌಲ್ಯಮಾಪನ ಆರಂಭವಾಗುವ ಮೂರು ದಿನ ಮೊದಲು ಮತ್ತು ನಂತರ ಕೇಂದ್ರವನ್ನು ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿ ಎಲ್ಲ ಕೊಠಡಿಗಳು ಮತ್ತು ಪೀಠೋಪಕರಣಗಳನ್ನು ಸ್ಯಾನಿಟೈಸ್ ಮಾಡಬೇಕು ಎಂದು ತಿಳಿಸಿದೆ.

ಥರ್ಮಲ್ ಸ್ಕ್ಯಾನಿಂಗ್ ವೇಳೆ ನಿಗದಿಗಿಂತ ಹೆಚ್ಚಿನ ತಾಪಮಾನ ಕಂಡು ಬಂದಲ್ಲಿ ಜಂಟಿ ಮುಖ್ಯ ಮೌಲ್ಯಮಾಪಕರ ಗಮನಕ್ಕೆ ತರಬೇಕು. ಅಂತಹ ಮೌಲ್ಯಮಾಪಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡಬೇಕು. 55 ವರ್ಷ ಮೇಲ್ಪಟ್ಟ ಶಿಕ್ಷಕರು ಹಾಗೂ ತೀವ್ರತರ ಕಾಯಿಲೆಯಿಂದ ಬಳಲುತ್ತಿರುವ (ಉಸಿರಾಟ ತೊಂದರೆ, ಜ್ವರ, ಒಣ ಕೆಮ್ಮು, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆ) ಶಿಕ್ಷಕರಿಗೆ ಮೌಲ್ಯಮಾಪನದಿಂದ ವಿನಾಯಿತಿ ನೀಡಬೇಕು. ಕರೊನಾ ಪಾಸಿಟಿವ್, ಕ್ವಾರಂಟೈನ್​ಗೆ ಒಳಗಾಗಿದ್ದರೆ ಅಥವಾ ವೈದ್ಯಕೀಯ ತಪಾಸಣೆಗೆ ಒಳಗಾಗಿ ವರದಿ ನಿರೀಕ್ಷೆಯಲ್ಲಿರುವ ಶಿಕ್ಷಕರನ್ನು ಮೌಲ್ಯಮಾಪನ ಕಾರ್ಯಕ್ಕೆ ತೆಗೆದುಕೊಳ್ಳಬಾರದು ಎಂದು ಸೂಚಿಸಿದೆ.

ಮೌಲ್ಯಮಾಪನಕ್ಕೆ ಹಾಜರಾಗುವ ಶಿಕ್ಷಕರು ಮಂಡಳಿ ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕು, ಮೌಲ್ಯಮಾಪನ ಕೇಂದ್ರದ ‘ನೋಂದಣಿ ಕೌಂಟರ್’ ಮೂಲಕವೇ ಪ್ರವೇಶ ಪಡೆಯಬೇಕು. ಮೌಲ್ಯಮಾಪನ ಕೇಂದ್ರದಲ್ಲಿ ಒಂದು ಡೆಸ್ಕ್​ನಲ್ಲಿ ಗರಿಷ್ಠ ಇಬ್ಬರು ಶಿಕ್ಷಕರು ಮಾತ್ರ ಕುಳಿತುಕೊಳ್ಳಬೇಕು. ಒಂದು ಡೆಸ್ಕ್​ನಿಂದ ಇನ್ನೊಂದು ಡೆಸ್ಕ್​ಗೆ ಕನಿಷ್ಠ 3 ಅಡಿ ಅಂತರ ಕಾಯ್ದುಕೊಳ್ಳಬೇಕು. ಎಲ್ಲ ನಿಯಮಗಳನ್ನು ಎಲ್ಲರೂ ಕಡ್ಡಾಯ ವಾಗಿ ಪಾಲಿಸಲೇಬೇಕು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಮುಂಜಾಗ್ರತಾ ಕ್ರಮಗಳು: ಮೌಲ್ಯಮಾಪಕರ ಬ್ಯಾಚ್​ವೈಸ್ ಪಟ್ಟಿ ಹಾಗೂ ಕೊಠಡಿ ಸಂಖ್ಯೆಯನ್ನು ಮೌಲ್ಯಮಾಪನ ಕೇಂದ್ರದ ಆವರಣದಲ್ಲಿರುವ ಸೂಚನಾ ಫಲಕದಲ್ಲಿ ಎರಡು ಅಥವಾ ಮೂರು ಕಡೆ ಪ್ರದರ್ಶಿಸಬೇಕು. ್ಝಕ್ಷಕರು ಕೊಠಡಿಗಳಿಗೆ ತೆರಳುವಾಗ ತಮ್ಮದೇ ಆದ ಕುಡಿವ ನೀರಿನ ಬಾಟಲ್, ವೈಯಕ್ತಿಕ ಸ್ಯಾನಿಟೈಸರ್, ಮಾಸ್ಕ್, ಛತ್ರಿ ಹಾಗೂ ಆಹಾರದ ಡಬ್ಬಿಯನ್ನು ಕಡ್ಡಾಯವಾಗಿ ತರಬೇಕು. ್ಝೌಚಗೃಹಗಳಲ್ಲಿ ಶುಚಿತ್ವ ಕಾಪಾಡಬೇಕು. ಸೋಪು, ಹ್ಯಾಂಡ್ ವಾಷ್, ಸ್ಯಾನಿಟೈಸರ್ ಇಡಬೇಕು. ್ಝ್ರತಿ ಕೇಂದ್ರಗಳಿಗೆ ಇಬ್ಬರು ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ್ಝ್ಷೇತ್ರ ಶಿಕ್ಷಣಾಧಿಕಾರಿಗಳು ಮೌಲ್ಯಮಾಪಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ್ಝಕ್ಷಕರು ಪ್ರಯಾಣಿಸುವ ನಿಯೋಜಿತ ಬಸ್ಸುಗಳಲ್ಲಿ ಸ್ಯಾನಿಟೈಸ್ ಮಾಡಲು ಹಾಗೂ ಬಸ್ಸಿನೊಳಗೆ ದೈಹಿಕ ಅಂತರ ಕಾಯ್ದುಕೊಳ್ಳಲು ಸೂಕ್ತ ಮುಂಜಾಗ್ರತೆ ವಹಿಸುವುದು. ್ಝೌಲ್ಯಮಾಪನ ಕೇಂದ್ರದಲ್ಲಿ ಪ್ರತಿ 150 ಮೌಲ್ಯಮಾಪಕರಿಗೆ ಒಂದರಂತೆ ಆರೋಗ್ಯ ತಪಾಸಣಾ ಕೌಂಟರ್ ಸ್ಥಾಪಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net