ಪಾಂಚೋಲಿ ಕೊರಳಿಗೆ ದಿಶಾ ಆತ್ಮಹತ್ಯೆ ಪ್ರಕರಣ!; ದೂರು ದಾಖಲಿಸಿದ ಸೂರಜ್​

pancholi
Published on

ಸುಶಾಂತ್ ಸಿಂಗ್​ ಆತ್ಮಹತ್ಯೆಯ ಪ್ರಕರಣ ಒಂದೆಡೆ ಸಾಗುತ್ತಿದ್ದರೆ, ಅದರ ಜತೆಗೆ ಸುಶಾಂತ್​ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ್​ ಆತ್ಮಹತ್ಯೆ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇಬ್ಬರ ಆತ್ಮಹತ್ಯೆಗೆ ಸಾಮ್ಯತೆ ಇದೆ ಎಂದು ಪೊಲೀಸ್​ ಇಲಾಖೆ ಸಾವಿಗೆ ನಿಖರ ಕಾರಣ ಏನಿರಬಹುದೆಂಬ ಹುಡುಕಾಟದಲ್ಲಿದ್ದಾರೆ. ಈ ನಡುವೆ ಇದೇ ದಿಶಾ ಪ್ರಕರಣದಲ್ಲಿ ಬಾಲಿವುಡ್​ ನಟ ಸೂರಜ್​ ಪಾಂಚೋಲಿ ಹೆಸರೂ ತಳುಕು ಹಾಕಿಕೊಂಡಿದೆ.

ದು, ದಿಶಾ ಆತ್ಮಹತ್ಯೆ ಪ್ರಕರಣದಲ್ಲಿ ಸೂರಜ್​ ಪಾಂಚೋಲಿ ಹೆಸರು ತಳುಕು ಹಾಕಿಕೊಂಡಿದ್ದೇ ತಡ, ಮುಂಬೈ ಪೊಲೀಸ್​ಗೆ ದೂರು ನೀಡಿದ್ದಾರೆ. ಸುಖಾಸುಮ್ಮನೆ ಪ್ರಕರಣದಲ್ಲಿ ನನ್ನ ಹೆಸರನ್ನು ಜೋಡಿಸಿ ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ವರ್ಸೋವಾ ಪೊಲೀಸ್​ ಠಾಣೆಯಲ್ಲಿ ಸೋಮವಾರ ದೂರು ನೀಡಿದ್ದಾರೆ.

ಯಾವುದೇ ಆಧಾರ ಇಲ್ಲದೆ, ಸುಶಾಂತ್​ ಸಿಂಗ್​ ಮತ್ತು ದಿಶಾ ಸಾಲಿಯಾನ್​ ಪ್ರಕರಣದಲ್ಲಿ ನನ್ನನ್ನು ಎಳೆದು ತರುತ್ತಿದ್ದಾರೆ ಎಂದಿರುವ ಸೂರಜ್​, ಈ ಸಂಬಂಧ ಸೋಷಿಯಲ್​ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

‘ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಯೇ ಹರಿದಾಡುತ್ತಿದೆ. ಮಾಧ್ಯಮದ ಮೇಲಿನ ನಂಬಿಕೆಯೇ ಇಲ್ಲದಂತಾಗಿದೆ. ದಿಶಾ ಜತೆಗೆ ನಾನು ಯಾವುದೇ ಫೋಟೋ ತೆಗೆಸಿಕೊಂಡಿಲ್ಲ. ಆ ಫೋಟೋ 2016ರಲ್ಲಿ ನನ್ನ ಸ್ನೇಹಿತೆ ಅನುಶ್ರೀ ಗೌರ್ ಜತೆ ಕ್ಲಿಕ್ಕಿಸಿಕೊಂಡಿದ್ದು. ದಯಮಾಡಿ ಬ್ರೇನ್​ ವಾಷ್​ ಮಾಡುವ ಕೆಲಸವನ್ನು ಇಲ್ಲಿಗೆ ಕೈ ಬಿಡಿ, ಮಾನಸಿಕ ನೆಮ್ಮದಿ ಹಾಳು ಮಾಡಬೇಡಿ’ ಎಂದು ದೂರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net