

ಬೆಂಗಳೂರು: ಖಾಲಿ ಉಳಿದಿರುವ 15 ನಿಗಮ, ಮಂಡಳಿ ಅಧ್ಯಕ್ಷ ಸ್ಥಾನವನ್ನು ಶೀಘ್ರವೇ ಭರ್ತಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಅಹವಾಲು ಸ್ವೀಕಾರ ವೇಳೆ, ನಮಗೆ ನಿಗಮ, ಮಂಡಳಿಗಳಲ್ಲಿ ಅವಕಾಶ ಮಾಡಿಕೊಡಿ, ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇವೆಂದು ಹಲವರು ಅರ್ಜಿ ಹಿಡಿದು ನಿಂತಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಈಗಾಗಲೇ ಬಹುತೇಕ ನಿಗಮ, ಮಂಡಳಿ ನೇಮಕ ಮುಗಿದಿದೆ. ನಿಗಮ, ಮಂಡಳಿಗಳಿಗೆ ನಿರ್ದೇಶಕರನ್ನ ಮಾಡುವ ಅವಕಾಶ ಮಾತ್ರ ಇದೆ. ಸದ್ಯ ಬಾಕಿ ಇರುವ 10-15 ನಿಗಮ, ಮಂಡಳಿಗಳಿಗೆ ಶೀಘ್ರವೇ ನೇಮಕ ಮಾಡಲಾಗುವುದು ಎಂದರು.
ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರು ಇದ್ದಾರೆ, ಎಲ್ಲರಿಗೂ ನಿಗಮ, ಮಂಡಳಿ ಕೊಡಲು ಕಷ್ಟಸಾಧ್ಯವಾಗಲಿದೆ. ಹಾಗಾಗಿಯೇ ಎರಡು ಅವಧಿಗೆ ನಿಗಮ, ಮಂಡಳಿಗೆ ನೇಮಕ ಮಾಡಲಾಗುವುದು ಎಂದರಲ್ಲದೇ ಸಿಎಂ ಪರಮೇಶ್ವರ್ ನೇತೃತ್ವದಲ್ಲಿ ನಿಗಮ, ಮಂಡಳಿ ಸದಸ್ಯರ ಆಯ್ಕೆಗೆ ಸಮಿತಿ ಮಾಡಿದ್ದೇವೆ. ಅರ್ಜಿ ಕೊಡಿ, ಅರ್ಹರನ್ನು ಪರಿಗಣಿಸಲಾಗುವುದೆಂದು ಭರವಸೆ ನೀಡಿದರು.