ವಿಮಾನದ ಮೇಲಿನ ತನ್ನ ಭಾವಚಿತ್ರ ತಾಯಿಯ ಆಶೀರ್ವಾದವೆಂದ ಸೂದ್

Sonu sood
Published on

ಮುಂಬೈ: ತಮ್ಮ ಭಾವಚಿತ್ರವಿರುವ ಬೋಯಿಂಗ್​​ 737 ವಿಮಾನ ಹಾರಾಡುತ್ತಿರುವ ದೃಶ್ಯವನ್ನು ಶನಿವಾರ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿರುವ ನಟ ಸೋನುಸೂದ್​ ಈ ಯಶಸ್ಸು ತನ್ನ ತಾಯಿಯ ಆಶೀರ್ವಾದವಾಗಿದೆ ಎಂದು ಬರೆದುಕೊಂಡಿದ್ದಾರೆ.

ಕೊರೊನಾ ಸಮಯದಲ್ಲಿ ಸಾವಿರಾರು ಜನರನ್ನು ತಮ್ಮ ತವರಿನತ್ತ ತೆರಳಲು ಸಹಾಯ ಮಾಡಿದ್ದ ಕಾರ್ಯವನ್ನು ಮೆಚ್ಚಿ ಕಳೆದ ವರ್ಷ ಸ್ಪೈಸ್​ ಜೆಟ್​ ವಿಮಾನದ ಮೇಲೆ ಸೋನು ಸೂದ್ ಫೋಟೊ ಹಾಕುವ ಮೂಲಕ ಗೌರವ ಸಲ್ಲಿಸಿತ್ತು. ಇದೀಗ ಈ ವಿಡಿಯೋವನ್ನು ನೆನಪಿಸಿಕೊಂಡಿದ್ದಾರೆ.ಇದು ಕೇವಲ ತಾಯಿಯ ಆಶೀರ್ವಾದವಾಗಿದೆ ನಿಜವಾದ ಹೋರಾಟ ಇನ್ನೂ ಬಾಕಿ ಇದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಓರ್ವ ನಿಮ್ಮ ಬಗ್ಗೆ ಅಪಾರ ಗೌರವವಿದೆ ಸರ್​ ಎಂದರೆ ಮತ್ತೋರ್ವ ಟ್ವಿಟ್ಟಿಗರು ಈ ವಿಮಾನದಲ್ಲಿ ಪ್ರಯಾಣಿಸಲು ಇನ್ನೂ ಕಾಯಲು ಆಗುತ್ತಿಲ್ಲ ಎಂದು ಹೊಗಳಿದ್ದಾರೆ.

2020ರಲ್ಲಿ ದೇಶವೇ ಲಾಕ್​ಡೌನ್​ನಲ್ಲಿದ್ದ ಸಂದರ್ಭದಲ್ಲಿ ತಮ್ಮದೇ ಸ್ವಂತ ಖರ್ಚಿನಲ್ಲಿ ರಷ್ಯಾ,ಫಿಲಿಫೈನ್ಸ್​​, ಉಜ್ಬೇಕಿಸ್ತಾನ್​ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಸಿಲುಕಿದ್ದ 1500ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ತಲುಪಿಸುವಲ್ಲಿ ಸೋನು ಸೂದ್​​ ಯಶಸ್ವಿಯಾಗಿದ್ದರು. ಅವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net