More

    ಸ್ವಾಮೀಜಿಗಳ ವಿರುದ್ಧ ನಾಲಗೆ ಹರಿಯಬಿಟ್ಟ ಶಾಸಕ ಶ್ರೀನಿವಾಸ್​

    ತುಮಕೂರು: ತಿಕ್ಕಲು ಸ್ವಾಮೀಜಿಗಳನ್ನು ಕರೆದುಕೊಂಡು ಬಂದು ಸ್ಟೇಟ್ಮೆಂಟ್‌ ಕೊಡ್ತಾರೆ. ಈ ಬೋ..ಮ… ಈಚೆ ಬಂದ್ರೆ ಜನರೆಲ್ಲಾ ಹೊಡೆದಾಡಬೇಕಾಗುತ್ತೆ… ಎಂದು ಗುಬ್ಬಿ ಕ್ಷೇತ್ರದ ಶಾಸಕ ಎಸ್​.ಆರ್​.ಶ್ರೀನಿವಾಸ್ ನಾಲಗೆ ಹರಿಯಬಿಟ್ಟಿದ್ದಾರೆ.

    ಬಿಜೆಪಿ ಸತ್ತು ಹೋಗುತ್ತಿದೆ. ಸಾರ್ವಜನಿಕ ರಂಗದಲ್ಲಿ ಕೆಟ್ಟ ಹೆಸರು ಬಂದಿದೆ. ಅಭಿವೃದ್ಧಿ ಕೆಲಸ ಮಾಡಿಲ್ಲ. ಪೆಟ್ರೋಲ್‌-ಡಿಸೇಲ್‌ ಬೆಲೆ ಏರಿಕೆಯಾಗಿದೆ. ಹಿಜಾಬ್‌, ಜಟಕಾ ಕಟ್‌ ಬೇಕಿಲ್ಲದ ವಿಚಾರಗಳು. ಬೆಲೆ ಏರಿಕೆ ವಿಚಾರ ಮರೆಮಾಚಲು ಈ ರೀತಿ ಮಾಡ್ತಿದ್ದಾರೆ. ಯಾವ ವಿಚಾರಗಳ ಮೇಲೆ ಚರ್ಚೆ ಆಗಬೇಕೋ ಅದು ಆಗುತ್ತಿಲ್ಲ. ತಿಕ್ಕಲು ಸ್ವಾಮೀಜಿಗಳನ್ನು ಕರೆದುಕೊಂಡು ಬಂದು ಸ್ಟೇಟ್ಮೆಂಟ್‌ ಕೊಡ್ತಾರೆ. ಯಾವನೋ ಒಬ್ಬ ನಿನ್ನೆ ಹೇಳಿದ್ದಾನೆ, ಧಾರ್ಮಿಕ ಕೇಂದ್ರಗಳಿಗೆ ಮುಸ್ಲಿಂ ಡ್ರೈವರ್‌ ಕರೆದುಕೊಂಡು ಹೋಗ್ಬೇಡಿ ಅಂತ. ಸ್ವಾಮಿ ಏನಾದ್ರೂ ಬಂದು ಡ್ರೈವಿಂಗ್‌ ಮಾಡ್ತಾನಾ? ಡ್ರೈವರ್​ಗಳನ್ನು ಹೊಂದಿಸಿ ಕೊಡ್ತಾನಾ? ಇವನ್ಯಾರು ಬಂದು ಕೇಳೊದಿಕ್ಕೆ. ಇನ್ನೊಬ್ಬ ತಲೆಕಟ್ಟ ಸ್ವಾಮಿ, ಕರಗ ಬಗ್ಗೆ ಮಾತನಾಡಿದ್ದಾನೆ. ಕಾವಿ ಬಟ್ಟೆಯವ್ರು ಅವರವರ ಕೆಲಸ ಮಾಡ್ಕೊಂಡು ಇದ್ರೆ ಒಳ್ಳೆಯದ್ದು. ಆಗ ದೇಶ ಶಾಂತಿಯಾಗಿರುತ್ತೆ… ಎಂದು ಏಕವಚನದಲ್ಲೇ ಬಾಯಿಬಂದಂತೆ ಶಾಸಕ ಶ್ರೀನಿವಾಸ್​ ಮಾತನಾಡಿದ್ದಾರೆ.

    ಕಾವಿ ಬಿಚ್ಚಿ ಖಾದಿ ಹಾಕಿಕೊಳ್ಳಲಿ. ಈ ಸ್ವಾಮಿಗಳು ಏನ್‌ ಸಂದೇಶ ಕೊಡ್ತಾರೆ? ಸ್ವಾಮೀಜಿಗಳು ದೇವಾಲಯದಲ್ಲಿ ಮುಸ್ಲಿಮರಿಂದ ಶಿಲೆಗಳನ್ನು ಕೆತ್ತಿಸಬೇಡಿ ಅನ್ತಾರೆ. ಇವರೇನು ಅಂಗಡಿ ಇಟ್ಟು, ಶಿಲೆ ಕೆತ್ತಿಕೊಡ್ತಾರಾ? ನೂರಕ್ಕೆ ತೊಂಬತ್ತು ಪರ್ಸೆಂಟ್‌ ಮುಸ್ಲಿಮರೇ ಶಿಲ್ಪ ಕೆತ್ತೊದು. ಬೆಲೆ ಏರಿಕೆಯಿಂದ ಸಾರ್ವಜನಿಕರು ಜೀವನ ಮಾಡುವುದು ಕಷ್ಟವಾಗಿದೆ. ಇದನ್ನು ಮರೆ ಮಾಚಲು ಪ್ರತಿನಿತ್ಯ ಧಾರ್ಮಿಕ ಹೇಳಿಕೆ ಕೊಡ್ತಿದ್ದಾರೆ. ಮುಸ್ಲಿಂ, ಕ್ರೈಸ್ತರನ್ನು ದೇಶದಿಂದ ಓಡಿಸುತ್ತೀರಾ?

    ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿ ಬಾಯಿಗೆ ಬಂದಂತೆ ಹೇಳಿಕೆ ಕೊಡಬಾರದು. ರಾಜ್ಯದ ಶಾಂತಿ ಕದಡುವ ಕೆಲಸ ಮಾಡಬಾರದು. ಗೃಹ ಸಚಿವರಾಗಿ ಸ್ಪಾರ್ಟ್‌ ನಲ್ಲಿ ಇದ್ದು ನೋಡಿದಂತೆ ಹೇಳಿಕೆ ಕೊಡ್ತಾರೆ. ಉರ್ದು ಮಾತನಾಡಲಿಲ್ಲ ಅನ್ನೋ ಕಾರಣಕ್ಕೆ ಯುವಕ ಚಂದ್ರುನನ್ನು ಚುಚ್ಚಿ ಚುಚ್ಚಿ ಸಾಯಿಸಿದ್ರು ಅಂತ ಹೇಳಿಕೆ ಕೊಡ್ತಾರೆ. ಇದರಿಂದ ಹಿಂದೂ ಮುಸ್ಲಿಂ ನಡುವೆ ಗಲಾಟೆಯಾಗಿದ್ರೆ ಯಾರು ಹೊಣೆ ಆಗ್ತಿದ್ರು? ಇಂತಹ ಗಲಭೆಗಳನ್ನು ನಿಯಂತ್ರಣ ಮಾಡುವ ಕರ್ತವ್ಯ ಗೃಹ ಸಚಿವರದ್ದು. ಇವರೇ ಪ್ರಚೋದನೆ ಮಾಡುವ ಕೆಲಸ ಮಾಡಿರುವುದು ಎಷ್ಟು ಸರಿ? ಇವರು ಗೃಹ ಸಚಿವರಾಗಿ ಮುಂದುವರೆಯಲು ಯಾವುದೇ ನೈತಿಕತೆಯಿಲ್ಲ. ರಾಜೀನಾಮೆ ಕೊಡುವುದು ಸೂಕ್ತ ಎಂದು ಶ್ರೀನಿವಾಸ್​ ಆಗ್ರಹಿಸಿದರು.

    ನಮ್ಮ ನಾಯಕರು ಕಾರ್ಯಕ್ರಮಕ್ಕೆ ಕಳ್ಳಿಪಾಳ್ಯಕ್ಕೆ ಬಂದಿದ್ದರು. ನಾಗರಾಜು ನಮ್ಮ ಮುಂದಿನ ಅಭ್ಯರ್ಥಿ ಅಂತ ಪ್ರಸ್ತಾಪ ಮಾಡಿದ್ದಾರೆ. ಅವರೇ ನಮ್ಮನ್ನು ಹೊರಗೆ ತೆಗೆದುಹಾಕುವ ಕೆಲಸ ಮಾಡುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಲ್ಲ ಎಂದು ಎಸ್.ಆರ್‌ ಶ್ರೀನಿವಾಸ್‌ ಸ್ಪಷ್ಟಪಡಿಸಿದರು.

    ಖಾಸಗಿ ವಾಹನಕ್ಕೆ ಸರ್ಕಾರಿ ಲಾಂಛನ-ನಾಮಫಲಕ ಹಾಕಿಕೊಂಡು ಪ್ರವಾಸಕ್ಕೆ ಬಂದ ಗ್ರಾಪಂ ಅಧ್ಯಕ್ಷ!

    ಮಗಳೇ, ಬಾರವ್ವ ಆ ಕಾಮುಕನಿಗೆ ತಕ್ಕ ಪಾಠ ಕಲಿಸೋಣ… ಎನ್ನುತ್ತಾ ಕೋಣೆಗೆ ಹೋದ ತಂದೆಗೆ ಕಾದಿತ್ತು ಆಘಾತ!

    BJP ಸರ್ಕಾರದಲ್ಲಿ HDK ಅವರೇ ಪ್ರಭಾವಿ? ತಹಸೀಲ್ದಾರ್​ ಎತ್ತಂಗಡಿಗೆ ಕೈ ಹಾಕಿದ CPYಗೆ ಕೆಲವೇ ಗಂಟೆಯಲ್ಲಿ ಶಾಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts