

Sonu Sood: ನಟ ಸೋನು ಸೂದ್ ಕೊರೋನಾ ಸಮಸಯದಲ್ಲಿ ವೈದ್ಯಕೀಯ ಸಹಾಯ ಮಾಡುವ ಮೂಲಕವಾಗಿ ಜನರ ಕಷ್ಟಕ್ಕೆ ನೆರವಾಗಿದ್ದರು. ಹೆಚ್ಚಿನ ಜನಮನ್ನಣೆ ಪಡೆದಿದ್ದ ನಟನಿಗೆ ಯಾವುದೇ ರಾಜಕೀಯ ಆಫರ್‌ಗಳು ಬಂದಿವೆಯೇ? ಯಾವುದಾದರೂ ಪಕ್ಷದ ಪ್ರಮುಖರು ರಾಜಕೀಯಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆಯೇ? ಎನ್ನುವ ಪ್ರಶ್ನೆಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸೋನು ಅವರೇ ಈ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
'ಕೆಲವು ರಾಜಕೀಯ ಪಕ್ಷಗಳು ನನಗೆ ಆಫರ್‌ಗಳನ್ನು ನೀಡಿವೆ. ನಾನು ಅವರನ್ನು ಸಂಪರ್ಕಿಸಲೇ ಇಲ್ಲ. ಆದರೆ, ಅವರು ನನ್ನನ್ನು ಸಂಪರ್ಕಿಸಿದರು. ಆಫರ್ ಗಳು ಬಂದಿವೆ' ಎಂದು ಸೋನು ಸೂದ್ ಹೇಳಿದ್ದಾರೆ.
ರಾಜಕೀಯ ಪಕ್ಷಗಳು ನನಗೆ ದೊಡ್ಡ ಆಫರ್ ನೀಡಿದ್ದಾರೆ. ನಾನು ಬರುವುದಿಲ್ಲ ಎಂದು ಹೇಳಿದೆ. ಬೇಕಾದರೆ ನೀವೇ ಸಿಎಂ ಆಗುತ್ತೀರಿ,’’ ಎಂದು ಹೇಳಿದರು. ''ಸಿಎಂ ಸ್ಥಾನ ಸಿಗದಿದ್ದರೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗುವುದು. ಬೇರೆ ಪಕ್ಷ ಬಂದು ರಾಜ್ಯಸಭಾ ಸ್ಥಾನ ನೀಡಲಿದೆ ಎಂದು ಸೋನು ಸೂದ್ ಹೇಳಿದ್ದಾರೆ.
"ಆ ಎಲ್ಲಾ ರಾಜಕೀಯ ಕೊಡುಗೆಗಳನ್ನು ನಾನು ಇಷ್ಟಪಡುವುದಿಲ್ಲ. ಯಾಕೆಂದರೆ ನನಗೆ ರಾಜಕೀಯಕ್ಕೆ ಬರುವ ಯೋಚನೆ ಇಲ್ಲ. ನಾನು ರಾಜಕೀಯಕ್ಕೆ ಹೋದರೆ ನನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೇನೆ. ಮುಕ್ತವಾಗಿ ಸಮಾಜ ಸೇವಾ ಚಟುವಟಿಕೆಗಳನ್ನು ಮಾಡುವ ಅವಕಾಶವನ್ನು ಕಳೆದುಕೊಳ್ಳುತ್ತೇನೆ. ಜನರಿಂದ ದೂರ ಇರುತ್ತೇನೆ. ನಾನು ಜನರಿಂದ ದೂರ ಇರಲಾರೆ,’’ ಎಂದು ಹೇಳಿದರು.
“ಇಂತಹ ದೊಡ್ಡ ರಾಜಕೀಯ ಆಫರ್‌ಗಳು ಬರುತ್ತವೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಆದರೆ ನನ್ನ ಬಗ್ಗೆ ತುಂಬಾ ಎತ್ತರವಾಗಿ ಯೋಚಿಸಿದ್ದಕ್ಕೆ ಅವರೆಲ್ಲರಿಗೂ ಋಣಿಯಾಗಿದ್ದೇನೆ. ಕೆಲವರಿಗೆ ರಾಜಕೀಯದಿಂದ ಹಣ ಬೇಕು. ಇತರರು ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಾರೆ. ರಾಜಕೀಯವನ್ನು ಜನಸೇವೆಗೆ ಬಳಸಿಕೊಳ್ಳುವವರು ಬಹಳ ಕಡಿಮೆನಾನು ಜನರ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದ್ಧಾರೆ.