

ಮುಂಬೈ: ಹಿರಿಯ ಸಂಗೀತ ಗಾಯಕ ಸೋನು ನಿಗಮ್(Sonu Nigam) ಅತ್ಯುತ್ತಮ ಗಾಯಕ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಅನೇಕ ಬಾರಿ ಅವರು ತಮ್ಮ ಗಾಯನಕ್ಕಿಂತ ಹೆಚ್ಚಾಗಿ ಅವರ ಹೇಳಿಕೆಗಳಿಗೆ ಸುದ್ದಿಯಲ್ಲಿರುತ್ತಾರೆ. ಸೋನು ನಿಗಮ್ ಅವರು ಇತ್ತೀಚೆಗಷ್ಟೇ ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ವಿರುದ್ಧ ತಮ್ಮ ಕೋಪವನ್ನು ಹೊರಹಾಕಿದ್ದಾರೆ.
ಅಸಲಿಗೆ ಸೋನು ನಿಗಮ್ ಜೈಪುರದಲ್ಲಿ ಕಾರ್ಯಕ್ರಮವನ್ನು ನೀಡಿದ್ದರು. ಅಲ್ಲಿ ಸಿಎಂ ಭಜನ್ ಲಾಲ್ ಶರ್ಮಾ ಸೇರಿದಂತೆ ಅನೇಕ ರಾಜಕಾರಣಿಗಳು ಆಗಮಿಸಿದ್ದರು. ಆದರೆ ಕಾರ್ಯಕ್ರಮದ ಮಧ್ಯದಲ್ಲಿ ಸಿಎಂ ಅಲ್ಲಿಂದ ನಿರ್ಗಮಿಸಿದರು. ಈ ಬಗ್ಗೆ ಸೋನು ನಿಗಮ್ ತುಂಬಾ ಬೇಸರಗೊಂಡಿದ್ದು ವಿಡಿಯೋ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋನು ನಿಗಮ್ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಾನು ಜೈಪುರದ ಕನ್ಸರ್ಟ್ನಿಂದ ಬರುತ್ತಿದ್ದೇನೆ. ಕಾರ್ಯಕ್ರಮಕ್ಕೆ ಬಹಳಷ್ಟು ಜನರು ಬಂದಿದ್ದರು. ಇದು ತುಂಬಾ ಒಳ್ಳೆಯ ಹಾಗೂ ಪ್ರತಿಷ್ಠಿತ ಕಾರ್ಯಕ್ರಮವಾಗಿತ್ತು. ಪ್ರತಿ ಮೂಲೆಯಿಂದಲೂ ಜನರು ಬಂದಿದ್ದರು. ಜತೆಗೆ ಸಿಎಂ, ಯುವ ಸಚಿವರು. ಮತ್ತು ಕ್ರೀಡಾ ಸಚಿವರು ಬಂದಿದ್ದರು. ಆದರೆ ಅವರೆಲ್ಲಾ ಕಾರ್ಯಕ್ರಮದ ಮಧ್ಯೆಯಲ್ಲಿಯೇ ಹೊರಟು ಹೋದರು. ಅವರು ಹೋದ ಬಳಿಕ ತಕ್ಷಣ ಕೆಲವು ಜನರ ಅಲ್ಲಿಂದ ಹೊರಟು ಹೋದರು.
ನಿಮ್ಮ ಕಲಾವಿದರನ್ನು ನೀವು ಮೆಚ್ಚದಿದ್ದರೆ ಜನರು ಏನು ಮಾಡುತ್ತಾರೆ. ಅವರು ಏನು ಮಾಡುತ್ತಾರೆ? ಅವರು ಏನು ಯೋಚಿಸುತ್ತಾರೆ? ರಾಜಕೀಯ ನಾಯಕರಲ್ಲಿ ನನ್ನದೊಂದು ಮನವಿ. ನೀವು ಬ್ಯುಸಿ ಇರುತ್ತೀರಿ ಆದ್ದರಿಂದ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಹೊರಟುಬಿಡಿ ಎಂದು ವಿನಂತಿಸುತ್ತೇನೆ. ಅಥವಾ ಕಲಾವಿದರನ್ನು ಅವಮಾನಿಸುವ ಬದಲು ಕಾರ್ಯಕ್ರಮಕ್ಕೆ ಬರಬೇಡಿ ಎಂದು ವಿನಮ್ರವಾಗಿ ವಿನಂತಿಸುತ್ತಿದ್ದೇನೆ ಎಂದು ಸೋನು ನಿಗಮ್ ಹೇಳಿದ್ದಾರೆ.
ನೀವು ಇದ್ದಕ್ಕಿದ್ದಂತೆ ಮಧ್ಯದಲ್ಲಿ ಹೋಗಬೇಕಾದರೆ ಯಾವುದೇ ಕಲಾವಿದರ ಕಾರ್ಯಕ್ರಮಕ್ಕೆ ದಯವಿಟ್ಟು ಹಾಜರಾಗಬೇಡಿ ಎಂದು ಭಾರತದ ಎಲ್ಲಾ ಗೌರವಾನ್ವಿತ ರಾಜಕಾರಣಿಗಳಿಗೆ ವಿನಮ್ರ ವಿನಂತಿ. ಇದು ಕಲೆ, ಕಲಾವಿದರು ಮತ್ತು ತಾಯಿ ಸರಸ್ವತಿಗೆ ಮಾಡಿದ ಅವಮಾನ ಎಂದು ತಿಳಿಸಿದ್ದಾರೆ.
ಸೋನು ನಿಗಮ್ ದೇಶದ ಶ್ರೇಷ್ಠ ಮತ್ತು ಪ್ರತಿಭಾವಂತ ಗಾಯಕರಲ್ಲಿ ಒಬ್ಬರು. ಅನೇಕ ಹಿಟ್ ಹಾಡುಗಳನ್ನು ಹಾಡಿರುವ ಇವರು ಇತ್ತೀಚೆಗೆ ಭೂಲ್ ಭುಲೈಯಾ 3ರ 'ಮೇರೆ ಧೋಲ್ನಾ 3.0' ಹಾಡಿನ ಮೂಲಕ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು.(ಏಜೆನ್ಸೀಸ್)